Saturday, October 11, 2025

ಗಡಗಡ ನಡುಗಿದ ವಿಜಯಪುರ: ಬೆಚ್ಚಿ ಬಿದ್ದ ಸ್ಥಳೀಯರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯಪುರ ಜಿಲ್ಲೆಯಲ್ಲಿ ರಾತ್ರಿ ಮತ್ತೆ ಭೂಕಂಪನದ ಅನುಭವವಾಗಿದೆ. ಗ್ರಾಮೀಣ ಪ್ರದೇಶದ 12 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಸಮಯದಲ್ಲಿ ಭಾರೀ ಸದ್ದು ಕೇಳಿ, ಜನರು ಭಯದಿಂದ ಮನೆಗಳಿಂದ ಹೊರಗೆ ಓಡಿದ್ದಾರೆ. ಪ್ರಾಥಮಿಕ ವರದಿ ಪ್ರಕಾರ, ಭೂಕಂಪದ ತೀವ್ರತೆ 2.8 ರಷ್ಟು ದಾಖಲಾಗಿದೆ.

ಹೊನ್ನೂಟಗಿ, ಕವಲಗಿ, ಕಗ್ಗೋಡ, ಮಧಬಾವಿ, ದ್ಯಾಬೇರಿ ಮತ್ತು ತಿಕೋಟ ತಾಲೂಕಿನ ಕೆಲ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಸ್ಥಳೀಯರು ಈ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಭೂಕಂಪನ ಸಮಯದಲ್ಲಿ ಭಾರೀ ಸದ್ದು ಕೇಳಿ, ಕೆಲವು ಮನೆಗಳಲ್ಲಿದ್ದವರು ತಕ್ಷಣ ಹೊರಗೆ ಓಡಿದ್ದಾರೆ. ಹಿಂದಿನ ತಿಂಗಳು ಸಿಂದಗಿ ಪಟ್ಟಣದಲ್ಲಿ ಸರಣಿ ರೂಪದಲ್ಲಿ ಭೂಕಂಪನದ ಅನುಭವವಾಗಿತ್ತು. ಈಗ ನಗರ ಭಾಗದಲ್ಲಿ ಕೂಡ ಭೂಮಿ ಕಂಪಿಸಿದ ಘಟನೆ ಉಂಟಾಗಿದ್ದು, ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

error: Content is protected !!