ಮೊದಲು ಪ್ಯಾನ್‌ಗೆ ಎಣ್ಣೆ ಚಕ್ಕೆ, ಲವಂಗ ಹಾಕಿ
ನಂತರ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಹಾಕಿ ಮಿಕ್ಸ್ ಮಾಡಿ
ನಂತರ ಇದಕ್ಕೆ ಟೊಮ್ಯಾಟೊ ಹಾಕಿ ಬಾಡಿಸಿ
ಅರಿಶಿಣ ಪುಡಿ ಹಾಕಿ, ನಂತರ ತುರಿದ ಕಾಯಿ, ಸಾಂಬಾರ್ ಪುಡಿ, ಖಾರದಪುಡಿ ಹಾಕಿ ಒಲೆಯ ಉರಿ ಆಫ್ ಮಾಡಿ
ಇದು ತಣ್ಣಗಾದ ನಂತರ ರುಬ್ಬಿ ಇಟ್ಟುಕೊಳ್ಳಿ, ಕೊತ್ತಂಬರಿ ಸೊಪ್ಪು ಸೇರಿಸಿದ್ರೆ ರುಚಿ ಸೂಪರ್
ನಂತರ ಬಾಣಲೆಗೆ ಎಣ್ಣೆ ಹಾಕಿ, ಆಲೂಗಡ್ಡೆ ಹಾಗೂ ಹುರುಳಿಕಾಳನ್ನು ಹಾಕಿ ಹುರಿಯಿರಿ
ನಂತರ ಈ ಮಿಕ್ಸಿಯ ಮಸಾಲಾ ಹಾಕಿ ಕುದಿಸಿ
ಉಪ್ಪು ಹಾಕಿ, ನೀರು ಹಾಕಿ ಬೇಕಾದ ಹದಕ್ಕೆ ತನ್ನಿ, ಎರಡು ವಿಶಲ್ ಕೂಗಿಸಿದ್ರೆ ಸಾಂಬಾರ್ ರೆಡಿ



