ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರದಿಂದ ಉದ್ಯೋಗಸ್ಥ ಮಹಿಯರಿಗೆ ಋತುಚಕ್ರ ರಜೆ ನೀಡಲು ಆದೇಶ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಕಡ್ಡಾಯವಾಗಿ ಋತುಚಕ್ರ ರಜೆ ನೀಡುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಂದ ರಜೆ ನೀಡಲು ಆದೇಶ ಹೊರಡಿಸಿದ್ದು, ಋತುಚಕ್ರ ರಜೆಗೆ ಷರತ್ತು ವಿಧಿಸಲಾಗಿದೆ.
ಕೆಲವು ಷರತ್ತುಗಳಿವೆ..
ಋತುಚಕ್ರದ ರಜೆ ಅದೇ ತಿಂಗಳಿನಲ್ಲಿ ಬಳಕೆ ಮಾಡಬೇಕು, ಮುಂದಿನ ತಿಂಗಳಿಗೆ ಕ್ಯಾರಿ ಆಗೋದಿಲ್ಲ.
ಋತುಚಕ್ರದ ರಜೆ ಪಡೆಯಲು ಯಾವುದೇ ಮೆಡಿಕಲ್ ಸರ್ಟಿಫಿಕೇಟ್ ನೀಡಬೇಕಿಲ್ಲ.
18 ರಿಂದ 52 ವಯಸ್ಸಿನ ಮಹಿಳಾ ಸರ್ಕಾರಿ ನೌಕರರು ಈ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ.
ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸಕ್ಷಮವಾದ ಪ್ರಾಧಿಕಾರಿಯು ಋತುಚಕ್ರ ರಜೆಯನ್ನು ಮಂಜೂರು ಮಾಡಬಹುದು.
ಋತುಚಕ್ರದ ರಜೆಯನ್ನು ಪ್ರತ್ಯೇಕವಾಗಿ ನಮೂದಿಸಬೇಕು.



