March 26, 2026
Thursday, March 26, 2026
spot_img

ಇರಾನ್–ಇಸ್ರೇಲ್ ಯುದ್ಧದ ಎಫೆಕ್ಟ್: ಜನ ಸಾಮಾನ್ಯರ ಜೇಬಿಗೆ ಭಾರವಾಗಲಿದೆ ಡ್ರೈಫ್ರೂಟ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್–ಇಸ್ರೇಲ್ ಯುದ್ಧದ ಪರಿಣಾಮ ಜಾಗತಿಕ ವ್ಯಾಪಾರದಲ್ಲಿ ಅಸ್ಥಿರತೆ ಕಾಣಿಸುತ್ತಿದ್ದು, ಇದರ ನೇರ ಪರಿಣಾಮ ಬೆಂಗಳೂರಿನ ಡ್ರೈಫ್ರೂಟ್ಸ್ ಮಾರುಕಟ್ಟೆಯ ಮೇಲೂ ಬೀಳತೊಡಗಿದೆ.

ವಿಶೇಷವಾಗಿ ಈಗ ರಂಜಾನ್ ಹಬ್ಬದ ಅವಧಿಯಲ್ಲಿ ಬೇಡಿಕೆ ಹೆಚ್ಚಿರುವ ಸಂದರ್ಭದಲ್ಲೇ ಸರಕುಗಳ ಸರಬರಾಜಿನಲ್ಲಿ ಅಡಚಣೆ ಉಂಟಾಗಿರುವುದು ವ್ಯಾಪಾರಿಗಳಲ್ಲಿ ಆತಂಕ ಹೆಚ್ಚಿಸಿದೆ.

ಪ್ರತಿ ವರ್ಷ ರಂಜಾನ್ ಅವಧಿಯಲ್ಲಿ ಖರ್ಜೂರ ಸೇರಿದಂತೆ ಹಲವಾರು ಡ್ರೈಫ್ರೂಟ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಉಪವಾಸ ಮುಗಿಸಿದ ಬಳಿಕ ಇವುಗಳನ್ನು ಆಹಾರವಾಗಿ ಬಳಸುವ ಪದ್ಧತಿ ಇರುವುದರಿಂದ ಮಾರುಕಟ್ಟೆಗಳಲ್ಲಿ ವ್ಯಾಪಾರ ಚುರುಕಾಗಿರುತ್ತದೆ. ಆದರೆ ಈ ಬಾರಿ ಯುದ್ಧದ ಪರಿಣಾಮವಾಗಿ ಮಧ್ಯಪ್ರಾಚ್ಯದಿಂದ ಸರಕುಗಳ ಸಾಗಣೆ ವ್ಯತ್ಯಯಗೊಂಡಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ:

ಸಾಮಾನ್ಯವಾಗಿ ಡ್ರೈಫ್ರೂಟ್ಸ್‌ಗಳ ದೊಡ್ಡ ಪ್ರಮಾಣವು ಸೌದಿ ಅರೇಬಿಯಾ ಮತ್ತು ಇರಾನ್ ಸೇರಿದಂತೆ ಹಲವು ದೇಶಗಳಿಂದ ಬರುತ್ತಿತ್ತು. ಈಗ ಯುದ್ಧದ ಕಾರಣದಿಂದ ಅಲ್ಲಿನ ಬಂದರುಗಳಲ್ಲಿ ಸರಕುಗಳ ಸಾಗಣೆ ತಡವಾಗಿದ್ದು, ಹೊಸ ಸ್ಟಾಕ್ ರಾಜ್ಯಕ್ಕೆ ತಲುಪುವಲ್ಲಿ ಅಡಚಣೆ ಎದುರಾಗಿದೆ.

ಇದೀಗ ಮಾರುಕಟ್ಟೆಯಲ್ಲಿ ಇರುವ ಸ್ಟಾಕ್‌ನಿಂದಲೇ ಮಾರಾಟ ನಡೆಯುತ್ತಿದೆ. ಆದರೆ ಯುದ್ಧ ಇನ್ನೂ ಕೆಲ ದಿನಗಳು ಮುಂದುವರಿದರೆ ಬೆಲೆಗಳು ವೇಗವಾಗಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಎಚ್ಚರಿಕೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !