Friday, November 7, 2025

ಕಬ್ಬು ಬೆಳೆಗಾರರ ಹೋರಾಟದ ಎಫೆಕ್ಟ್‌ : ಸಿಎಂ ಸಿದ್ದು ತುಮಕೂರು ಪ್ರವಾಸ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ತುಮಕೂರು ಪ್ರವಾಸ ರದ್ದುಗೊಳಿಸಿದ್ದಾರೆ.

ವಿಧಾನಸೌಧದಲ್ಲಿ ಸರಣಿ ಸಭೆ ನಡೆಯುತ್ತಿದೆ. ಕಾರ್ಖನೆ ಮಾಲೀಕರು, ರೈತರ ಜೊತೆ ಸಭೆ ಅಪೂರ್ಣವಾದ ಹಿನ್ನೆಲೆಯಲ್ಲಿ ಸಿಎಂ ತುಮಕೂರು ಪ್ರವಾಸ ರದ್ದಾಗಿದೆ.

ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ನಿವಾಸದಲ್ಲಿ ಸಿಎಂಗೆ ಔತಣಕೂಟ ಏರ್ಪಡಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಸಭೆ ಬಳಿಕ ಸಿದ್ದರಾಮಯ್ಯ ಅವರು ತುಮಕೂರಿಗೆ ಪ್ರವಾಸ ಬೆಳೆಸಲು ಯೋಜಿಸಿದ್ದರು. ಆದರೆ, ಈಗ ರಾಜಣ್ಣ ಔತಣಕೂಟಕ್ಕೆ ಸಿಎಂ ಮಿಸ್ ಆಗಿದ್ದಾರೆ.

ಟನ್ ಕಬ್ಬಿಗೆ 3,500 ಬೆಲೆ ನಿಗದಿಪಡಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

error: Content is protected !!