January18, 2026
Sunday, January 18, 2026
spot_img

ಮೊಟ್ಟೆ ಪ್ರಿಯರೇ ಗಮನಿಸಿ: ನಿಮ್ಮ ಮನೆಗೆ ಬರೋ ಮೊಟ್ಟೆ ಸೇಫ್ ಹೌದಾ? ವಾರದಲ್ಲೇ ಸಿಗಲಿದೆ ಉತ್ತರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರ್ದಿಷ್ಟ ಬ್ರ್ಯಾಂಡ್‌ನ ಮೊಟ್ಟೆಗಳ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಯಿದೆ ಎಂಬ ವಿಡಿಯೋವೊಂದು ಭಾರಿ ವೈರಲ್ ಆಗಿತ್ತು. ಇದು ಸಾರ್ವಜನಿಕರಲ್ಲಿ ದೊಡ್ಡ ಮಟ್ಟದ ಗೊಂದಲ ಮತ್ತು ಭಯವನ್ನು ಸೃಷ್ಟಿಸಿತ್ತು. ತಕ್ಷಣ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ, ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಮುಂದಾಗಿದೆ.

ಸರ್ಕಾರಿ ಪ್ರಯೋಗಾಲಯಗಳಲ್ಲಿ ಈ ನಿರ್ದಿಷ್ಟ ‘ಜೀನೋಟಾಕ್ಸಿಕ್’ ಅಂಶವನ್ನು ಪತ್ತೆಹಚ್ಚುವ ಸುಧಾರಿತ ತಂತ್ರಜ್ಞಾನದ ಕೊರತೆ ಇರುವುದರಿಂದ, ಮಾದರಿಗಳನ್ನು ಪರೀಕ್ಷಿಸಲು ಸರ್ಕಾರವು ಖಾಸಗಿ ಲ್ಯಾಬ್‌ಗಳಿಗೆ ಸೂಚನೆ ನೀಡಿದೆ. ಕೇವಲ ಒಂದು ವಾರದ ಒಳಗಾಗಿ ಈ ಬಗ್ಗೆ ನಿಖರ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ರಾಜ್ಯದ ವಿವಿಧ ಭಾಗಗಳಿಂದ ಮೊಟ್ಟೆಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಪ್ರಮುಖವಾಗಿ, ಬಿಬಿಎಂಪಿ ವ್ಯಾಪ್ತಿಯ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ವಲಯಗಳು. ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ತುಮಕೂರು, ಬಾಗಲಕೋಟೆ, ಕಲಬುರಗಿ, ದಕ್ಷಿಣ ಕನ್ನಡ, ಬೆಳಗಾವಿ, ದಾವಣಗೆರೆ ಮತ್ತು ರಾಯಚೂರು.

ಒಟ್ಟಾರೆಯಾಗಿ, ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರವು ಈ ಹೆಜ್ಜೆ ಇಟ್ಟಿದ್ದು, ವರದಿ ಬಂದ ನಂತರವಷ್ಟೇ ಮೊಟ್ಟೆ ಸುರಕ್ಷಿತವೇ ಅಥವಾ ಇಲ್ಲವೇ ಎಂಬ ಅಧಿಕೃತ ಮಾಹಿತಿ ಹೊರಬೀಳಲಿದೆ.

Must Read

error: Content is protected !!