Friday, September 5, 2025

ಬೆಂಗಳೂರಿನಲ್ಲಿ ಈದ್ ಮಿಲಾದ್ ಸಂಭ್ರಮ: ನಗರದ ಹಲವಡೆ ಸಂಚಾರ ಬದಲಾವಣೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಯುವ ಹಿನ್ನೆಲೆಯಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ನಗರ ಪೊಲೀಸರು ಹಲವೆಡೆ ಸಂಚಾರ ಬದಲಾವಣೆ ಮಾಡಿದ್ದಾರೆ.

ಕೆ.ಜಿ.ಹಳ್ಳಿ, ಪುಲಿಕೇಶಿನಗರ, ಶಿವಾಜಿನಗರ ಭಾಗಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗ ಸೂಚಿಸಲಾಗಿದೆ. ನಿಗದಿತ ಸ್ಥಳಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.

ಇಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕೆ.ಜಿ.ಹಳ್ಳಿ, ಪುಲಿಕೇಶಿನಗರ ಮತ್ತು ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲವು ಮಾರ್ಗಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಸಂಚಾರ ನಿರ್ಬಂಧ

ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್‌ವರೆಗೆ ಸಂಚಾರ ನಿಲ್ಲಿಸಲಾಗುವುದು.

ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆಗೆ ಹೋಗುವ ಮಾರ್ಗ ಮುಚ್ಚಲಾಗುವುದು.

ಎಂ.ಎಂ. ರಸ್ತೆಯಲ್ಲಿ ಮಾಸ್ಕ್ ಜಂಕ್ಷನ್‌ನಿಂದ ನೇತಾಜಿ ಜಂಕ್ಷನ್ ಕಡೆಗೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ಬರಲಿದೆ.

ನೇತಾಜಿ ಜಂಕ್ಷನ್‌ನಿಂದ ಹೇನ್ಸ್ ಜಂಕ್ಷನ್‌ವರೆಗೆ ಹೇನ್ಸ್ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗ

ನಾಗವಾರ ಜಂಕ್ಷನ್‌ನಿಂದ ಶಿವಾಜಿನಗರಕ್ಕೆ: ಹೆಣ್ಣೂರು – ಕಾಚರಕನಹಳ್ಳಿ – ಲಿಂಗರಾಜಪುರಂ ಪ್ರೈಓವರ್ – ರಾಬರ್ಟ್‌ನ್ ರಸ್ತೆ – ಹೇನ್ಸ್ ರಸ್ತೆ ಮೂಲಕ.

ಶಿವಾಜಿನಗರದಿಂದ ನಾಗವಾರಕ್ಕೆ: ಸ್ಪೆನ್ಸರ್ ರಸ್ತೆ – ಕೋಲ್ಸ್ ರಸ್ತೆ – ವೀಲರ್ಸ್ ರಸ್ತೆ ಮುಖಾಂತರ.

ಆರ್.ಟಿ.ನಗರದಿಂದ ನಾಗವಾರಕ್ಕೆ: ಕಾವಲ್ ಬೈರಸಂದ್ರ – ಪುಷ್ಪಾಂಜಲಿ ಟಾಕೀಸ್ – ವೀರಣ್ಣ ಪಾಳ್ಯ ಮೂಲಕ.

ಟ್ಯಾನರಿ ರಸ್ತೆ ಬಳಿಯಿಂದ ನಾಗವಾರ ಕಡೆಗೆ: ನೇತಾಜಿ ಜಂಕ್ಷನ್ – ಮಾಸ್ಕ್ ಜಂಕ್ಷನ್ – ಕ್ಲಾರೆನ್ಸ್ ರೈಲ್ವೆ ಓವರ್‌ಬ್ರಿಜ್ – ಹೆಣ್ಣೂರು ರಸ್ತೆ – ಲಿಂಗರಾಜಪುರಂ ಪ್ರೈಓವರ್ ಮೂಲಕ.

ಮಾಸ್ಕ್ ಜಂಕ್ಷನ್‌ನಿಂದ ನೇತಾಜಿ ಜಂಕ್ಷನ್ ಕಡೆಗೆ: ಕೋಲ್ಸ್ ರಸ್ತೆ – ಸೌಂಡರ್ಸ್ ರಸ್ತೆ – ಸೆಂಟ್ ಜಾನ್ಸ್ ಚರ್ಚ್ ರಸ್ತೆ – ಕೋಲ್ಸ್ ಪಾರ್ಕ್ ಜಂಕ್ಷನ್ – ಹೇನ್ಸ್ ಜಂಕ್ಷನ್ ಮೂಲಕ.

ನೇತಾಜಿ ಜಂಕ್ಷನ್‌ನಿಂದ ಹೇನ್ಸ್ ಜಂಕ್ಷನ್ ಕಡೆಗೆ: ಎಂ.ಎಂ ರಸ್ತೆ – ಮಾಸ್ಕ್ ರಸ್ತೆ – ಕೋಲ್ಸ್ ರಸ್ತೆ – ಸೌಂಡರ್ಸ್ ರಸ್ತೆ – ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ.

ಪಾರ್ಕಿಂಗ್‌ ಇಲ್ಲ!

ಪಾಟರಿ ಸರ್ಕಲ್‌ನಿಂದ ನಾಗವಾರ ಸಿಗ್ನಲ್,

ಗೋವಿಂದಪುರ ಜಂಕ್ಷನ್‌ನಿಂದ ಗೋವಿಂದಪುರ ಕಾ&ಸು ಪೊಲೀಸ್ ಠಾಣೆವರೆಗೆ,

ಹೆಚ್.ಬಿ.ಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್‌ನಿಂದ ನರೇಂದ್ರ ಟೆಂಟ್ ಜಂಕ್ಷನ್‌ವರೆಗೆ,

ನೇತಾಜಿ ರಸ್ತೆ, ಹೇನ್ಸ್ ರಸ್ತೆ, ಎಂ.ಎಂ ರಸ್ತೆ, ಮಾಸ್ಕ್ ರಸ್ತೆ, ಕೋಲ್ಸ್ ರಸ್ತೆ, ಸೌಂಡರ್ಸ್ ರಸ್ತೆ, ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮತ್ತು ಮಿಲ್ಲರ್ಸ್ ರಸ್ತೆಗಳ ಎರಡೂ ಬದಿಗಳಲ್ಲಿ ವಾಹನ ನಿಲ್ಲಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ