Sunday, September 21, 2025

ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಎಕ್ಸ್ ಖಾತೆ ಹ್ಯಾಕ್: ಪಾಕ್, ಟರ್ಕಿ ಧ್ವಜ ಪೋಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಅಧಿಕೃತ ಎಕ್ಸ್ ಖಾತೆ (X Account) ಹ್ಯಾಕ್ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಹ್ಯಾಕರ್‌ಗಳು ಶಿಂಧೆಯ ಖಾತೆಯಿಂದ ಪಾಕಿಸ್ತಾನ ಮತ್ತು ಟರ್ಕಿಯ ಧ್ವಜಗಳನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಯಿತು.

ಅಧಿಕೃತ ಮೂಲಗಳ ಪ್ರಕಾರ, ಖಾತೆ ಹ್ಯಾಕ್ ಆಗಿರುವುದು ಗಮನಕ್ಕೆ ಬಂದ ತಕ್ಷಣ ಸೈಬರ್ ಅಪರಾಧ ಪೊಲೀಸರ ಸಂಪರ್ಕಿಸಲಾಯಿತು. ಸುಮಾರು 30-45 ನಿಮಿಷಗಳ ಒಳಗಾಗಿ ತಾಂತ್ರಿಕ ತಜ್ಞರ ನೆರವಿನಿಂದ ಖಾತೆಯನ್ನು ಮರುಸ್ಥಾಪಿಸಲಾಯಿತು. ಅಲ್ಲದೇ ಹ್ಯಾಕರ್‌ಗಳು ಹಾಕಿದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಘಟನೆಯ ಸಮಯದಲ್ಲಿ ಏಷ್ಯಾಕಪ್ ಸೂಪರ್ 4ರಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯುತ್ತಿರುವುದರಿಂದ, ಹ್ಯಾಕರ್‌ಗಳು ಉದ್ದೇಶಪೂರ್ವಕವಾಗಿ ಪಾಕ್ ಮತ್ತು ಟರ್ಕಿಯ ಧ್ವಜಗಳನ್ನು ಪೋಸ್ಟ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಅಭಿಮಾನಿಗಳಲ್ಲಿ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತವಾಗಿದೆ.

ಸೈಬರ್ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಹ್ಯಾಕ್ ಹಿಂದಿರುವವರನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ. ಇಂತಹ ಘಟನೆಗಳು ರಾಜಕೀಯ ನಾಯಕರ ಖಾತೆ ಸುರಕ್ಷತೆ ಮತ್ತು ಸಾಮಾಜಿಕ ಜಾಲತಾಣದ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ.

ಇದನ್ನೂ ಓದಿ