March 24, 2026
Tuesday, March 24, 2026
spot_img

ಮಾಲ್‌ನ 4ನೇ ಅಂತಸ್ತಿನಿಂದ ಆಯತಪ್ಪಿ ಬಿದ್ದು ಎಲೆಕ್ಟ್ರಿಷಿಯನ್ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಾಲ್‌ನ ನಾಲ್ಕನೇ ಅಂತಸ್ತಿನಲ್ಲಿ ಕೆಲಸ ಮಾಡುವಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಡಿಆರ್‌ಸಿ ಮಾಲ್‌ನಲ್ಲಿ ನಡೆದಿದೆ.

ಸುನೀಲ್ (27) ಮೃತ ದುರ್ದೈವಿ. ಮಾಲ್‌ನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು ಹಾಗೂ ಗಾಯಗೊಂಡವರನ್ನು ಚಂದ್ರು ಎಂದು ಗುರುತಿಸಲಾಗಿದೆ.

ಸೋಮವಾರ ಡಿಆರ್‌ಸಿ ಮಾಲ್‌ನ ನಾಲ್ಕನೇ ಮಹಡಿಯಲ್ಲಿದ್ದ ಬೋರ್ಡ್‌ವೊಂದನ್ನು ಸುನೀಲ್ ತೆರವು ಮಾಡುತ್ತಿದ್ದರು. ಈ ವೇಳೆ ಗಮನಕ್ಕೆ ಬಾರದೇ ಪಿಒಪಿ ಮೇಲೆ ಕಾಲಿಟ್ಟು ಕೆಳಗೆ ಕುಸಿದರು. ತಕ್ಷಣ ಕೈಗೆ ಸಿಕ್ಕಿದ್ದ ರಾಡ್‌ವೊಂದನ್ನು ಹಿಡಿದುಕೊಂಡು ನೇತಾಡುತ್ತಿದ್ದರು. ಇದನ್ನು ಗಮನಿಸಿದ ಚಂದ್ರು ಸಹಾಯಕ್ಕೆ ಮುಂದಾಗಿದ್ದು, ಇವರೂ ಕೂಡ ಪಿಒಪಿ ಮೇಲೆ ಕಾಲಿಟ್ಟು ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಈ ವೇಳೆ ರಾಡ್ ಹಿಡಿದುಕೊಂಡಿದ್ದ ಸುನೀಲ್ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !