ತಂಪಾದ ಸಂಜೆಯಲ್ಲಿ ಬಿಸಿ ಬಿಸಿ ಸೂಪ್ ಒಂದು ಸಿಪ್ಪು ಕುಡಿದರೆ ದೇಹವೇ ತಾಜಾ ಆಗುತ್ತದೆ. ಅದರಲ್ಲೂ ಚಿಕನ್ ನೂಡಲ್ ಸೂಪ್ ಅಂದರೆ ಮಾಡೋದು ಕೂಡ ತುಂಬಾನೇ ಸುಲಭ. ಸಣ್ಣ ಜ್ವರ, ನೆಗಡಿ ಅಥವಾ ದಣಿವಾಗಿದ್ದಾಗಲೂ ಈ ಸೂಪ್ ದೇಹಕ್ಕೆ ಶಕ್ತಿ ನೀಡುತ್ತದೆ ಮತ್ತು ಮನಸ್ಸಿಗೆ ಸಾಂತ್ವನ ನೀಡುತ್ತದೆ.
ಬೇಕಾಗುವ ಪದಾರ್ಥಗಳು:
ಚಿಕನ್ ಅಥವಾ ತರಕಾರಿ ಸ್ಟಾಕ್ – 900 ಎಂಎಲ್
ಚಿಕನ್ ಬ್ರೆಸ್ಟ್ – 200 ಗ್ರಾಂ
ಸಣ್ಣಗೆ ಹೆಚ್ಚಿದ ಶುಂಠಿ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 1 ಕಲೆ
ಅಕ್ಕಿ ಅಥವಾ ಗೋಧಿ ನೂಡಲ್ಸ್ – 50 ಗ್ರಾಂ
ಸ್ವೀಟ್ ಕಾರ್ನ್ – 2 ಟೀಸ್ಪೂನ್
ಸಣ್ಣಗೆ ಕತ್ತರಿಸಿದ ಮಶ್ರೂಮ್ – 2-3
ಸ್ಪ್ರಿಂಗ್ ಆನಿಯನ್ – 2 ಕಡ್ಡಿ
ಸೋಯಾ ಸಾಸ್ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಪುದೀನ – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲಿಗೆ ಬಾಣಲೆಯಲ್ಲಿ ಚಿಕನ್ ಅಥವಾ ತರಕಾರಿ ಸ್ಟಾಕ್ ಹಾಕಿ ಕುದಿಸಿಕೊಳ್ಳಿ. ಅದಕ್ಕೆ ಚಿಕನ್ ಬ್ರೆಸ್ಟ್ ಹಾಗೂ ಉಪ್ಪು ಸೇರಿಸಿ, ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ 20 ನಿಮಿಷಗಳವರೆಗೆ ಬೇಯಿಸಿ. ಬೇಯಿಸಿದ ಚಿಕನ್ ತುಂಡುಗಳನ್ನು ತೆಗೆದು ಸಣ್ಣ ಉದ್ದದ ಚೂರುಗಳಾಗಿ ಕತ್ತರಿಸಿ.
ಈಗ ಸ್ಟಾಕ್‌ಗೆ ನೂಡಲ್ಸ್, ಚಿಕನ್ ಚೂರುಗಳು, ಸ್ವೀಟ್ ಕಾರ್ನ್, ಮಶ್ರೂಮ್, ಸ್ಪ್ರಿಂಗ್ ಆನಿಯನ್ ಹಾಗೂ ಸೋಯಾ ಸಾಸ್ ಸೇರಿಸಿ 3–4 ನಿಮಿಷಗಳವರೆಗೆ ಕುದಿಸಿ. ತಯಾರಾದ ಸೂಪ್‌ನ್ನು ಬೌಲ್‌ಗೆ ಹಾಕಿ, ಮೇಲಿಂದ ಪುದೀನ ಎಲೆಗಳಿಂದ ಅಲಂಕರಿಸಿ ಬಿಸಿ ಬಿಸಿ ಸರ್ವ್ ಮಾಡಿ.

