Wednesday, December 3, 2025

ʼಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಎಲ್ಲವೂ ತಿಳಿಯಾಗಿದೆʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಸಿಎಂ-ಡಿಸಿಎಂ ಏನ್ ಚರ್ಚೆ ಮಾಡಿದ್ರು ಗೊತ್ತಿಲ್ಲ. ಆದರೆ ಈಗ ಎಲ್ಲವೂ ತಿಳಿಯಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಎಲ್ಲ ಗೊಂದಲ ಮುಗೀತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಏನ್ ಚರ್ಚೆ ಆಯ್ತು ಗೊತ್ತಿಲ್ಲ. ಎಲ್ಲವೂ ತಿಳಿಯಾಯ್ತು ಅಂತ ನಾವು ಅಂದುಕೊಂಡಿದ್ದೇವೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಅನಾವಶ್ಯಕವಾಗಿ ಗೊಂದಲ ಸೃಷ್ಟಿ ಆಗಿತ್ತು. ಅದಕ್ಕೆ ಮಾಧ್ಯಮಗಳು ಸಹಾಯ ಮಾಡಿದ್ದೀರಾ. ಈಗ ಎಲ್ಲವೂ ತಿಳಿಯಾಗಿದೆ ಅಂದುಕೊಳ್ತೀನಿ ಎಂದಿದ್ದಾರೆ.

ಬ್ರೇಕ್‌ಫಾಸ್ಟ್ ಮೀಟಿಂಗ್ ಬಗ್ಗೆ ನಾನು ಜಾಸ್ತಿ ಪ್ರತಿಕ್ರಿಯೆ ಕೊಡಲ್ಲ. ಈಗ ಬ್ರೇಕ್‌ಫಾಸ್ಟ್ ಮೀಟಿಂಗ್ ಆಗಿ ಎಲ್ಲವೂ ಇತ್ಯರ್ಥ ಆಗಿದೆ. ಸಣ್ಣಪುಟ್ಟ ವ್ಯತ್ಯಾಸ ಈಗ ಸರಿ ಹೋಗಿದೆ. ಅಧಿವೇಶನ ಪ್ರಾರಂಭ ಆಗ್ತಿದೆ. ಅನೇಕ ಜ್ವಲಂತ ಸಮಸ್ಯೆಗಳನ್ನ ಚರ್ಚೆ ಮಾಡೋದಕ್ಕೆ ವಿಪಕ್ಷಗಳು ತಯಾರಾಗಿದ್ದಾರೆ. ನಾವು ವಿಶ್ವಾಸಕ್ಕೆ ತಗೊಂಡು ಕೆಲಸ ಮಾಡ್ತೀವಿ ಎಂದು ಹೇಳಿದ್ದಾರೆ.

ರಾಜಕೀಯ ಶಾಶ್ವತ ಅಲ್ಲ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ಶಾಶ್ವತ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ಯಾಕೆ ಸಿಎಂ ಹಾಗೆ ಹೇಳಿದ್ರು ಅಂತ ಅವರನ್ನ ಕೇಳಬೇಕು ಎಂದು ತಿಳಿಸಿದ್ದಾರೆ.

error: Content is protected !!