ಹೊಸದಿಗಂತ ವರದಿ ಗದಗ:
ಲಕ್ಕುಂಡಿಯಲ್ಲಿ 2ನೇ ದಿನವೂ ಉತ್ಖನನ ಕಾರ್ಯ ಮುಂದುವರಿದಿದ್ದು, ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಪುರಾತನ ಅವಶೇಷ ಪತ್ತೆಯಾಗಿದೆ.
ದೇವಸ್ಥಾನದ 10 ಮೀಟರ್ ಸುತ್ತಳತೆ ಜಾಗದಲ್ಲಿ ಒಂದುವರೆ ಅಡಿ ಅಗೆಯುತ್ತಿದ್ದಂತೆ ಪ್ರಾಚೀನ ಅವಶೇಷ ಮಾದರಿ ಪತ್ತೆಯಾಗಿದೆ. ಇದು ಯಾವ ಕಾಲದ್ದು?ಯಾವ ಶಿಲಾಕೃತಿ ಎಂಬುದನ್ನು ಪುರಾತತ್ವ ಇಲಾಖೆ ತಜ್ಞರು ಸ್ಪಷ್ಟ ಪಡಿಸಬೇಕಾಗಿದೆ.
ಅಷ್ಟೇ ಅಲ್ಲದೇ ಉತ್ಖನನ ಕೆಲಸಕ್ಕೆ ತೊಂದರೆಯಾಗದಂತೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದ್ದು, ಫೋಟೋ, ವಿಡಿಯೋಗ್ರಫಿಗೆ ನಿಷೇಧ ಹೇರಲಾಗಿದೆ.


