January16, 2026
Friday, January 16, 2026
spot_img

India vs South Africa | ಈಡನ್ ಗಾರ್ಡನ್ಸ್‌ನಲ್ಲಿ ರೋಚಕ ತಿರುವು: ಕೇವಲ 93 ರನ್‌ಗೆ ಆಲ್ಔಟ್ ಆದ ಟೀಮ್ ಇಂಡಿಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಮೊದಲ ಟೆಸ್ಟ್‌ಗೆ ರೋಚಕ ತಿರುವಿನ ವೇದಿಕೆಯಾಗಿದೆ. ಪಂದ್ಯದ ಆರಂಭದಲ್ಲಿ ಯಾವುದೇ ತಂಡದ ಹಿಡಿತ ಸ್ಪಷ್ಟವಾಗದ ಸ್ಥಿತಿಯಿಂದ, ಕೊನೆ ಕ್ಷಣದಲ್ಲೇ ಸೌತ್ ಆಫ್ರಿಕಾ ಅಚ್ಚರಿಯ ಮುನ್ನಡೆ ಪಡೆದು ಭಾರತ ವಿರುದ್ಧ 30 ರನ್‌ಗಳ ರೋಚಕ ಗೆಲುವು ದಾಖಲಿಸಿದೆ.

ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡ 159 ರನ್‌ಗಳಿಗೆ ಆಲೌಟ್ ಆಯಿತು. ವೇದಿಕೆ ಭಾರತದ ಬೌಲರ್‌ಗಳದ್ದಾಗಿದ್ದರೂ, ಭಾರತದ ಬ್ಯಾಟಿಂಗ್ ಕೂಡ ಅದೇ ದಾರಿಯಲ್ಲಿ ಸಾಗಿತು. ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್ 12 ರನ್‌ಗಳಲ್ಲಿ ಔಟಾದರೆ, ಕೆಎಲ್ ರಾಹುಲ್ 39 ರನ್‌ಗಳೊಂದಿಗೆ ಪೆವಿಲಿಯನ್ ಹಾದಿ ಸೇರಿದರು. ಮೂರನೇ ಕ್ರಮಾಂಕದಲ್ಲಿ ಬಂದ ವಾಷಿಂಗ್ಟನ್ ಸುಂದರ್ ಕೇವಲ 29 ರನ್‌ಗಳಲ್ಲಿ ಪೆವಿಲಿಯನ್ ಸೇರಿದರು. ಶುಭ್‌ಮನ್ ಗಿಲ್ ಗಾಯದ ಕಾರಣ ಕೇವಲ 4 ರನ್‌ಗಳಲ್ಲಿ ಹೊರನಡೆಯಬೇಕಾಯಿತು. ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ತಲಾ 27 ರನ್‌ಗಳಿಸಿದರೂ, ಮಧ್ಯಮ ಕ್ರಮಾಂಕ ದಿಟ್ಟ ನಿಲುವು ತೋರಲಿಲ್ಲ.

ಉಳಿದಂತೆ ಧ್ರುವ್ ಜುರೆಲ್ (14), ಅಕ್ಷರ್ ಪಟೇಲ್ (16), ಹಾಗೂ ಟೇಲ್-ಎಂಡರ್‌ಗಳು ತಲಾ ಒಂದೊಂದು ರನ್‌ಗಳನ್ನು ಮಾತ್ರ ಪೇರಿಸಿದರು, ಭಾರತ 189 ರನ್‌ಗಳಿಗೂ ಹೆಚ್ಚು ಏರಲೇ ಇಲ್ಲ. 30 ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ಗೆ ಬಂದ ಸೌತ್ ಆಫ್ರಿಕಾಗೂ ಸುಲಭವಾಗಲಿಲ್ಲ. ರವೀಂದ್ರ ಜಡೇಜಾ ತೀಕ್ಷ್ಣ ದಾಳಿಯಿಂದ ಆಫ್ರಿಕಾ ಬ್ಯಾಟ್ಸ್‌ಮನ್‌ಗಳನ್ನು ತೊಂದರೆಯಲ್ಲಿಟ್ಟಿದ್ದು, ಸಂಪೂರ್ಣ ತಂಡ 153 ರನ್‌ಗಳಿಗೆ ಕುಸಿಯಿತು. ಈ ಮೂಲಕ ಭಾರತಕ್ಕೆ 124 ರನ್‌ಗಳ ಗೆಲುವಿನ ಗುರಿ ಲಭಿಸಿತು.

ಆದರೆ ಭಾರತಕ್ಕೆ ಈ ಗುರಿಯೂ ಪರ್ವತಸಮಾನವಾಯಿತು. ಆಫ್ರಿಕಾ ಬೌಲರ್‌ಗಳು ಪ್ರತಿ ಓವರ್‌ಗೂ ಒತ್ತಡ ಹೆಚ್ಚಿಸುತ್ತಾ, ಭಾರತವನ್ನು ಕೇವಲ 93 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವರಾದರು. ಈ ಜಯದೊಂದಿಗೆ ಸೌತ್ ಆಫ್ರಿಕಾ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಪಡೆದಿದ್ದು, ಭಾರತಕ್ಕೆ ಮುಂದಿನ ಪಂದ್ಯದಲ್ಲಿ ಸರಣಿ ಉಳಿಸಿಕೊಳ್ಳಲು ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿದೆ.

Must Read

error: Content is protected !!