April 10, 2026
Friday, April 10, 2026
spot_img

ಯೂತ್ಸ್‌ ಫೇವರೆಟ್ ಮೆಕ್‌ಡೋನಾಲ್ಡ್ಸ್‌ನಲ್ಲಿ ಎಕ್ಸ್‌ಪೈರಿ ಐಟಮ್ಸ್‌ ಬಳಕೆ, ಎಣ್ಣೆಯಲ್ಲಿ ವಿಷಕಾರಿ ಅಂಶ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯೂತ್ಸ್‌ ಹೆಚ್ಚಾಗಿ ತಿನ್ನುವ ಮೆಕ್‌ಡೋನಾಲ್ಡ್ಸ್‌ನ ಔಟ್‌ಲೆಟ್‌ ಒಂದರಲ್ಲಿ ಎಕ್ಸ್ಪೈರಿ ಆಗಿರುವ ಪದಾರ್ಥಗಳನ್ನು ಬಳಸಿ ಬರ್ಗರ್‌ ತಯಾರಿಸಲಾಗುತ್ತಿದೆ. ಜತೆಗೆ ಪ್ಯಾಟಿಯನ್ನು ಕರಿಯಲು ವಿಷಕಾರಿ ಅಂಶ ಹೊಂದಿರುವ ಎಣ್ಣೆಯನ್ನು ಬಳಸುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದ್ದು, ಜನ ಭಯಭೀತರಾಗಿದ್ದಾರೆ.

ಜೈಪುರದ ಗೌರವ್‌ ಟವರ್‌ನಲ್ಲಿರುವ ಮೆಕ್ಡಿ ಔಟ್‌ಲೆಟ್‌ನಲ್ಲಿ ಈ ಆಘಾತಕಾರಿ ಅಂಶ ಪತ್ತೆಯಾಗಿದೆ. ಈ ಔಟ್‌ಲೆಟ್‌ನಲ್ಲಿ ಯಾವುದೇ ಸುರಕ್ಷಿತ ಮಾನದಂಡಗಳನ್ನು ಪಾಲಿಸಿಲ್ಲ ಎನ್ನಲಾಗಿದೆ.

ರಾಜಸ್ಥಾನದ ಪ್ರಸಿದ್ಧ ಪ್ರವಾಸಿ ತಾಣ ಜೈಪುರದ ಗೌರವ್ ಟವರ್’ನಲ್ಲಿರುವ ಮ್ಯಾಕ್‌ಡೊನಾಲ್ಡ್ಸ್ ಮಳಿಗೆಯ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಿಢೀರ್ ಆಗಿ ದಾಳಿ ನಡೆಸಿ ದ್ದಾರೆ. ತಪಾಸಣೆಯ ಸಮಯದಲ್ಲಿ, ಫ್ರೆಂಚ್ ಫ್ರೈಸ್ ಮತ್ತು ಇತರ ಕರಿದ ಆಹಾರಗಳಂತಹ ವಸ್ತುಗಳನ್ನು ತಯಾರಿಸಲು ಬಳಸುವ ಸಂಸ್ಕರಿಸಿದ ಪಾಮ್ ಎಣ್ಣೆಯನ್ನು ಅಧಿಕಾರಿಗಳು ಪರೀಕ್ಷಿಸಿದ್ದಾರೆ.

ಅಡುಗೆ ಎಣ್ಣೆಯನ್ನು ಪದೇ ಪದೇ ಬಳಸುವುದರಿಂದ ಅದರಲ್ಲಿ ವಿಷಕಾರಿ ಅಂಶ ಹೆಚ್ಚಾಗುತ್ತದೆ. ನಿಯಮದ ಪ್ರಕಾರ ಇದು 25% ಮೀರುವಂತಿಲ್ಲ. ಆದರೆ ಇಲ್ಲಿ ಸಸ್ಯಾಹಾರಿ ಪದಾರ್ಥಗಳ ಎಣ್ಣೆ ಯಲ್ಲಿ 31% ಟಿಪಿಸಿ ಕಂಡುಬಂದಿದೆ. ಹೆಚ್ಚಿನ ಟಿಪಿಸಿ ಮಟ್ಟವನ್ನು ಹೊಂದಿರುವ ಎಣ್ಣೆ ವಿಷಕಾರಿ ಯಾಗುತ್ತದೆ, ಕ್ಯಾನ್ಸರ್ ಜನಕ ಸಂಯುಕ್ತಗಳು ಮತ್ತು ಟ್ರಾನ್ಸ್ ಕೊಬ್ಬುಗಳು ಸೇರಿದಂತೆ ಹಾನಿಕಾರಕ ಪದಾರ್ಥಗಳ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !