January15, 2026
Thursday, January 15, 2026
spot_img

ಮೆಕ್ಸಿಕೋ ಸೂಪರ್‌ ಮಾರ್ಕೆಟ್‌ನಲ್ಲಿ ಸ್ಫೋಟ: ಮಕ್ಕಳು ಸೇರಿ 23 ಮಂದಿ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಾಯುವ್ಯ ಮೆಕ್ಸಿಕೋದ ಹರ್ಮೊಸಿಲ್ಲೊ ನಗರದ ಮಧ್ಯಭಾಗದಲ್ಲಿರುವ ಸೂಪರ್‌ ಮಾರ್ಕೆಟ್‌ನಲ್ಲಿ ಭಾರೀ ಪ್ರಮಾಣದ ಸ್ಫೋಟವೊಂದು ಸಂಭವಿಸಿದ್ದು, ಬರೋಬ್ಬರಿ 23 ಜನ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೆಕ್ಸಿಕೋ ಈ ವಾರಾಂತ್ಯದಲ್ಲಿ ವರ್ಣರಂಜಿತ ಹಬ್ಬಗಳನ್ನು ಆಚರಿಸುತ್ತಿದೆ.ಆದರೆ ನಿನ್ನೆ ಸಂಭವಿಸಿದ ದುರಂತದಿಂದಾಗಿ ಕರಾಳ ದಿನ ಆಚರಿಸುವಂತಾಗಿದೆ.

ಘಟನೆ ಬಗ್ಗೆ ಸೊನೊರಾ ರಾಜ್ಯದ ಗವರ್ನರ್ ಅಲ್ಫೊನ್ಸೊ ಡುರಾಜೊ ಪ್ರತಿಕ್ರಿಯಿಸಿದ್ದು, ಅಪಘಾತದ ಕಾರಣಗಳನ್ನು ಸ್ಪಷ್ಟಪಡಿಸಲು ನಾನು ಸಂಪೂರ್ಣ ಮತ್ತು ಪಾರದರ್ಶಕ ತನಿಖೆಗೆ ಆದೇಶಿಸಿದ್ದೇನೆ. ಮೃತರಲ್ಲಿ ಮಕ್ಕಳೂ ಸೇರಿದ್ದಾರೆ ಎಂದು ಹೇಳಿದ್ದಾರೆ.

ಪ್ರಾಣ ಕಳೆದುಕೊಂಡವರ ಕುಟುಂಬಗಳು ಮತ್ತು ಪ್ರೀತಿಪಾತ್ರರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಸಂತ್ರಸ್ತ ಕುಟುಂಬಗಳು ಮತ್ತು ಗಾಯಾಳುಗಳಿಗೆ ಸಹಾಯ ಮಾಡಲು ಬೆಂಬಲ ತಂಡಗಳನ್ನು ಕಳುಹಿಸಲು ಅವರು ನಿರ್ದೇಶಿಸಿದ್ದಾರೆ. ಬೆಂಕಿಯನ್ನು ನಂದಿಸಲಾಗಿದ್ದು, ವಿದ್ಯುತ್ ವೈಫಲ್ಯವೇ ಈ ದುರಂತಕ್ಕೆ ಕಾರಣವೆಂದು ದೂಷಿಸಲಾಗಿದೆ. ಆದರೆ ಬೆಂಕಿಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ನಗರದ ಅಗ್ನಿಶಾಮಕ ದಳದ ಮುಖ್ಯಸ್ಥರು ತಿಳಿಸಿದ್ದಾರೆ.

Must Read

error: Content is protected !!