Friday, August 29, 2025

ಏರ್‌ ಶೋ ಅಭ್ಯಾಸ ವೇಳೆ ಎಫ್‌-16 ಫೈಟರ್ ಜೆಟ್ ಪತನ: ಪೈಲಟ್ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಏರ್‌ ಶೋಗೆ ಅಭ್ಯಾಸ ನಡೆಸುತ್ತಿದ್ದ ಎಫ್-16 ಫೈಟರ್ ಜೆಟ್‌ವೊಂದು ಅಭ್ಯಾಸದ ವೇಳೆಯೇ ಪತನಗೊಂಡಿದ್ದು, ಈ ದುರ್ಘಟನೆಯಲ್ಲಿ ಫೈಟರ್ ಜೆಟ್‌ನ ಪೈಲಟ್ ಸಾವನ್ನಪ್ಪಿದ್ದಾರೆ.

ಸೆಂಟ್ರಲ್ ಪೋಲ್ಯಾಂಡ್‌ನ ರಾಡಾಮ್‌ನಲ್ಲಿ ಈ ಘಟನೆ ನಡೆದಿದ್ದು, ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆ ಆಗಿವೆ. ಪೋಲೆಂಡ್‌ನ ಉಪ ಪ್ರಧಾನ ಮಂತ್ರಿ ವ್ಲಾಡಿಸ್ಲಾ ಕೊಸಿನಿಯಾಕ್ ಕಮಿಸ್ಜ್ ಈ ಸುದ್ದಿಯನ್ನು ದೃಢಪಡಿಸಿದ್ದು, ಘಟನೆಯಿಂದ ವಾಯುಪಡೆಗೆ ದೊಡ್ಡ ನಷ್ಟ ಆದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಘಟನೆಯ ವೀಡಿಯೋ ವೈರಲ್ ಆಗಿದ್ದು, ಈ ಎಫ್‌-16 ಯುದ್ಧ ವಿಮಾನ ಪತನಗೊಂಡು ನೆಲಕ್ಕೆ ಬೀಳುವ ಮೊದಲು ಆಗಸದಲ್ಲಿ ಕಸರತ್ತು ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಬ್ಯಾರೆಲ್ ರೋಲ್ ಏರೋಬ್ಯಾಟಿಕ್ ಸಾಹಸ ಮಾಡುತ್ತಿರುವ ಈ ವಿಮಾನ ಕೆಲ ನಿಮಿಷದಲ್ಲಿ ಪತನಗೊಂಡು ಕೆಳಗೆ ಬಿದ್ದಿದೆ.

ಜಾಗತಿಕ ಕಾಲಮಾನ 17.30 ಅಂದರೆ ಭಾರತೀಯ ಸಮಯ ರಾತ್ರಿ 11 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ದುರಂತಕ್ಕೀಡಾದ ವಿಮಾನವೂ ಪೋಜ್ನಾನ್ ಬಳಿಯ 31 ನೇ ಟ್ಯಾಕ್ಟಿಕಲ್ ಏರ್ ಬೇಸ್‌ಗೆ ಸೇರಿತ್ತು ಎಂದು ಘಟನೆಯಲ್ಲಿ ಯಾವುದೇ ಪ್ರೇಕ್ಷಕನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೋಲೆಂಡ್ ಸಶಸ್ತ್ರ ಪಡೆಗಳ ಜನರಲ್ ಕಮಾಂಡ್ ತಿಳಿಸಿದೆ. ಈ ನಡುವೆ ಈ ವಾರಾಂತ್ಯದಲ್ಲಿ ನಡೆಯಬೇಕಿದ್ದ ಏರ್‌ಶೋ ರಾಡಮ್ 2025 ಅನ್ನು ರದ್ದುಗೊಳಿಸಲಾಗಿದೆ.

ಇದನ್ನೂ ಓದಿ