April 4, 2026
Saturday, April 4, 2026
spot_img

ನಾಳೆಯಿಂದ ದಸರಿಘಟ್ಟದ ಚೌಡೇಶ್ವರಿ ದೇಗುಲದಲ್ಲಿ ಜಾತ್ರಾ ಮಹೋತ್ಸವ

ಹೊಸ ದಿಗಂತ ವರದಿ, ತಿಪಟೂರು:

ತಾಲ್ಲೂಕಿನ ದಸರಿಘಟ್ಟದ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಚೌಡೇಶ್ವರಿ ದೇವಿ ದೇವಾಲಯದಲ್ಲಿ ಏ.5 ಭಾನುವಾರದಿಂದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದು ಶಾಖಾ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ. 5ರ ಸಂಜೆ 7 ಗಂಟೆಗೆ ಕಳಸ ಸ್ಥಾಪನೆ ಹಾಗೂ ಮದುವಣಗಿತ್ತಿ ಶಾಸ್ತ್ರ ನಡೆಯಲಿದ್ದು, ಏ.7ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ರಥಕ್ಕೆ ಕಳಸ ಸ್ಥಾಪನೆ, ಸಂಜೆ ಬಾಯಿ ಬೀಗ ಮತ್ತು ಪಲ್ಲಕ್ಕಿ ಉತ್ಸವ ನೆರವೇರಲಿದೆ.

ಏ.8 ರ ಬುಧವಾರ ಸಂಜೆ 4ಕ್ಕೆ ಗಂಗಾಸ್ನಾನ, ಅಶ್ವಮಾನೋತ್ಸವ, ರಾತ್ರಿ 8ಗಂಟೆಗೆ ಚೌಡೇಶ್ವರಿ ಅಮ್ಮನವರ ಮಹಾರಥೋತ್ಸವ ನೆರವೇರಲಿದೆ. ಏ.9ರ ಗುರುವಾರ ಸಂಜೆ 6 ಕ್ಕೆ ಚೌಡೇಶ್ವರಿ ಅಮ್ಮನವರ ಸಿಡಿ ಮಹೋತ್ಸವ ನೆರವೇರಲಿದೆ. ಸಮಸ್ತ ಭಕ್ತರು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !