ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದ್ದಂತೆ, ಬಾದಾಮಿ (Almond) ಬಹುತೇಕ ಎಲ್ಲರ ಆಹಾರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮೆದುಳಿಗೆ ಶಕ್ತಿ, ಹೃದಯಕ್ಕೆ ರಕ್ಷಣೆ, ತೂಕ ನಿಯಂತ್ರಣ ಹೀಗೆ ಅನೇಕ ಲಾಭಗಳ ಕಾರಣಕ್ಕೆ ಬಾದಾಮಿಯನ್ನು ಜನ ಹೆಚ್ಚು ಬಳಸುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ದೊರೆಯುವ ಪ್ರತಿಯೊಂದು ಬಾದಾಮಿ ನಿಜವಾದದ್ದೇನಾ ಎಂಬ ಪ್ರಶ್ನೆ ಸಹಜ. ನಕಲಿ ಅಥವಾ ಕಳಪೆ ಗುಣಮಟ್ಟದ ಬಾದಾಮಿಗಳು ಆರೋಗ್ಯಕ್ಕೆ ಹಾನಿ ಮಾಡುವ ಸಾಧ್ಯತೆಯೂ ಇದೆ. ಹೀಗಾಗಿ ನೀವು ಖರೀದಿಸುವ ಬಾದಾಮಿ ನಿಜವಾದದೋ ಅಲ್ಲವೋ ಎಂಬುದನ್ನು ಗುರುತಿಸುವುದು ಬಹಳ ಮುಖ್ಯ.
ಬಣ್ಣ ಮತ್ತು ಮೇಲ್ಮೈ ಗಮನಿಸಿ:
ಒರಿಜಿನಲ್ ಬಾದಾಮಿ ಸಾಮಾನ್ಯವಾಗಿ ತೆಳುವಾದ ಕಂದು ಬಣ್ಣದಲ್ಲಿದ್ದು, ಸ್ವಲ್ಪ ಒರಟಾದ ಮೇಲ್ಮೈ ಹೊಂದಿರುತ್ತದೆ. ತುಂಬಾ ಮಿನುಗುವ ಅಥವಾ ಅತಿಯಾದ ಬಣ್ಣ ಹೊಂದಿರುವ ಬಾದಾಮಿಗಳು ಸಂಸ್ಕರಣೆಯಲ್ಲಿರಬಹುದು.
ವಾಸನೆ ಪರೀಕ್ಷಿಸಿ:
ನಿಜವಾದ ಬಾದಾಮಿ ಸ್ವಲ್ಪ ಸಿಹಿಯಾದ, ನೈಸರ್ಗಿಕ ವಾಸನೆ ಹೊಂದಿರುತ್ತದೆ. ಕೆಟ್ಟ ವಾಸನೆ ಅಥವಾ ಎಣ್ಣೆಯ ವಾಸನೆ ಬಂದರೆ ಅದು ಹಳೆಯದಾಗಿರಬಹುದು.
ನೀರಿನ ಪರೀಕ್ಷೆ:
ಬಾದಾಮಿಗಳನ್ನು ನೀರಿನಲ್ಲಿ ಹಾಕಿದಾಗ ನಿಜವಾದವು ನಿಧಾನವಾಗಿ ನೀರು ಹೀರಿಕೊಂಡು ಊದಿಕೊಳ್ಳುತ್ತವೆ. ನಕಲಿ ಅಥವಾ ಹೆಚ್ಚು ಸಂಸ್ಕೃತ ಬಾದಾಮಿಗಳು ಹೆಚ್ಚು ಬದಲಾವಣೆ ತೋರಿಸದು.
ಚರ್ಮ ತೆಗೆಯುವಿಕೆ:
ನಿಜವಾದ ಬಾದಾಮನ್ನು ನೆನೆಸಿದ ನಂತರ ಅದರ ಚರ್ಮ ಸುಲಭವಾಗಿ ಹೊರಬರುತ್ತದೆ. ಚರ್ಮ ತುಂಬಾ ಅಂಟಿಕೊಂಡಿದ್ದರೆ ಅದು ಕಳಪೆ ಗುಣಮಟ್ಟದ ಸೂಚನೆ.
ರುಚಿ ಪರಿಶೀಲನೆ:
ಒರಿಜಿನಲ್ ಬಾದಾಮಿ ಸ್ವಲ್ಪ ಸಿಹಿ ಮತ್ತು ಮೃದುವಾದ ರುಚಿ ಹೊಂದಿರುತ್ತದೆ. ಕಹಿ ಅಥವಾ ಅಸಹಜ ರುಚಿ ಬಂದರೆ ತಿನ್ನುವುದನ್ನು ತಪ್ಪಿಸಿ.
ಖರೀದಿಸುವಾಗ ಗಮನಿಸಬೇಕಾದ ಅಂಶ
ಸಾಧ್ಯವಾದಷ್ಟು ವಿಶ್ವಾಸಾರ್ಹ ಅಂಗಡಿ ಅಥವಾ ಬ್ರ್ಯಾಂಡ್‌ನಿಂದ ಬಾದಾಮಿ ಖರೀದಿಸಿ. ತುಂಬಾ ಕಡಿಮೆ ದರದ ಆಮಿಷಕ್ಕೆ ಬಲಿಯಾಗದೆ ಗುಣಮಟ್ಟಕ್ಕೆ ಆದ್ಯತೆ ನೀಡಿ. ಸರಿಯಾದ ಬಾದಾಮಿಯನ್ನು ಆಯ್ಕೆ ಮಾಡಿದರೆ, ಆರೋಗ್ಯದ ಲಾಭವೂ ಉತ್ತಮವಾಗಿಯೇ ಸಿಗುತ್ತದೆ.


