Friday, January 9, 2026

ರಾಜ್ಯದ ಹಲವೆಡೆ ಹುಸಿ ಬಾಂಬ್ ಬೆದರಿಕೆ ಸಂದೇಶ: ಕಲಬುರಗಿಯ ವಿವಿಧೆಡೆ ಬಿಗಿ ತಪಾಸಣೆ

ಹೊಸದಿಗಂತ ವರದಿ ಕಲಬುರಗಿ:

ರಾಜ್ಯದ ಧಾರವಾಡ ಹೈಕೋರ್ಟ್ ಪೀಠ ಸೇರಿದಂತೆ ಇತರೆಡೆ ಪೀಠಗಳಿಗೆ ಹುಸಿ ಬಾಂಬ್ ಬೆದರಿಕೆಯ ಇಮೇಲ್ ಸಂದೇಶ ಬಂದ ಹಿನ್ನಲೆ, ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ, ಹೈಕೋರ್ಟ್ ಪೀಠ ಸೇರಿದಂತೆ ವಿವಿಧೆಡೆ ಕಲಬುರಗಿ ನಗರದ ಆಂಟಿ ಸಬೋಟೇಜ್ ಚೆಕ್ (ಎ.ಎಸ್.ಸಿ) ತಂಡ ಹಾಗೂ ಬಾಂಬ್ ಡಿಟೇಕ್ಟಿವ್ ಆಂಡ್ ಡಿಸ್ಪೋಜಲ್ (ಬಿಡಿಡಿಎಸ್) ತಂಡದಿಂದ ರೂಟಿನ್ ತಪಾಸಣೆ ನಡೆಸಲಾಯಿತು.

ರಾಜ್ಯದ ಧಾರವಾಡ ಹೈಕೋರ್ಟ್ ಪೀಠ ಸೇರಿ ಇತರೆ ನ್ಯಾಯಾಲಯಗಳಿಗೆ,ಗದಗ ಜಿಲ್ಲೆಯ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಆತ್ಮಾಹುತಿ ಬಾಂಬ್ ದಾಳಿ ನಡೆಸುವ ಕುರಿತು ಬಂದ ಇಮೇಲ್ ಹಾಗೂ ಬಾಗಲಕೋಟೆ ಜಿಲ್ಲಾ ನ್ಯಾಯಾಲಯ ಸೇರಿದಂತೆ ಬಂದ ಹುಸಿ ಇಮೇಲ್ ಹಿನ್ನೆಲೆ, ಬಾಂಬ್ ಡಿಸ್ಪೋಜಲ್ ತಂಡದಿಂದ ತೀವ್ರ ಪರಿಶೀಲನೆ ನಡೆಸಲಾಯಿತು.

ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಏಳು ದಿನ ಉತ್ತರ ಒಳನಾಡಿನಲ್ಲಿ ಮತ್ತಷ್ಟು ಚಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ನಿರೀಕ್ಷೆ

ಕಲಬುರಗಿಯಲ್ಲಿ ಎಲ್ಲೆಲ್ಲಿ ತಪಾಸಣೆ?

ಕಲಬುರಗಿ ನಗರ ಪೋಲಿಸ್ ಆಯುಕ್ತರ ಸೂಚನೆ ಮೇರೆಗೆ ನಗರದ ವ್ಯಾಪ್ತಿಯಲ್ಲಿ ಎಎಸ್ಸಿ,ಬಿಡಿಡಿಎಸ್ ತಂಡವು, ಬೆಳಿಗ್ಗೆ ವೇಳೆ ನಗರದ ಪ್ರಮುಖ ಸ್ಥಳಗಳಾದ ಏರ್ಪೋರ್ಟ್,ಬುದ್ಧ ವಿಹಾರ, ಹೈಕೋರ್ಟ್ ಪೀಠ, ಜಿಲ್ಲಾ ಕೋರ್ಟ್ ತಪಾಸಣೆ ನಡೆಸಲಾಗುತ್ತಿದೆ.ಅದೇ ರೀತಿ ಸಂಜೆ ಹೊತ್ತು ಕೇಂದ್ರ ಬಸ್ ನಿಲ್ದಾಣ,ನಗರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹೀಗೆ ರೂಟಿನ್ ಚೆಕ್ ನಡೆಸಲಾಗುತ್ತಿದೆ.

error: Content is protected !!