March 22, 2026
Sunday, March 22, 2026
spot_img

ಆನ್‌ಲೈನ್‌ ಗೇಮ್ಸ್‌ನಲ್ಲಿ ಸಾಲ ಮಾಡಿಕೊಂಡು ತೀರಿಸಲಾಗದೇ ಪ್ರಾಣಬಿಟ್ಟ ಕುಟುಂಬ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆನ್‌ಲೈನ್‌ ಗೇಮಿಂಗ್‌ ಹುಚ್ಚಿಗೆ ಬಿದ್ದು, ಸಾಲ ತೀರಿಸಲಾಗದೇ ಕುಟುಂಬವೊಂದು ಆತ್ಮಹತ್ಯೆಗೆ ಶರಣಾಗಿದೆ.

ಮಧ್ಯಪ್ರದೇಶದ ಶಹದೋಲ್​ ಜಿಲ್ಲೆಯಲ್ಲಿ ತಾಯಿ, ತಂದೆ ಹಾಗೂ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಯಿ ಮಾತ್ರ ಬದುಕುಳಿದಿದ್ದಾರೆ. ಮೂವರು ಒಟ್ಟಿಗೇ ಸಾಯುವ ನಿರ್ಧಾರ ಮಾಡಿ ವಿಷ ಕುಡಿದಿದ್ದಾರೆ.

ಸ್ಥಳದಲ್ಲೇ ತಂದೆ ಮಗಳು ಮೃತಪಟ್ಟಿದ್ದು, ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹತ್ತನೇ ತರಗತಿ ಓದುತ್ತಿದ್ದ ಮಗಳಿಗೆ ತಂದೆ ವಿಷ ನೀಡಿದ್ದಾರೆ. ಶಂಕರ್‌ ಲಾಲ್‌ ಗುಪ್ತಾ ಆನ್‌ಲೈನ್‌ ಗೇಮ್ಸ್‌ ಚಟಕ್ಕೆ ಬಿದ್ದಿದ್ದರು. ಹೂಡಿಕೆ ಮಾಡಿ ಅದೃಷ್ಟ ಪರೀಕ್ಷೆ ಮಾಡುತ್ತಿದ್ದರು. ಇದೇ ರೀತಿ ಆಟ ಆಡಿ ನಾಳ್ಕು ಲಕ್ಷ ಕಳೆದುಕೊಂಡಿದ್ದರು. ಜೊತೆಗೆ ಸಾಲವನ್ನೂ ಮಾಡಿಕೊಂಡಿದ್ದರು. ಇದೆಲ್ಲದರಿಂದ ಬೇಸತ್ತು ಮಗಳು ಹಾಗೂ ಪತ್ನಿಗೆ ಕೂಲ್‌ ಡ್ರಿಂಕ್‌ನಲ್ಲಿ ವಿಷ ಹಾಕಿ ಕೊಟ್ಟು ತಾನೂ ಕುಡಿದಿದ್ದಾರೆ.

ಇವರಿಗೆ 15 ವರ್ಷದ ಮಗನೂ ಇದ್ದು, ಆತ್ಮಹತ್ಯೆ ಸಮಯದಲ್ಲಿ ಈತ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಮೂವರು ಮಾತ್ರ ವಿಷ ಕುಡಿದಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !