ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್‌ನ ತಬಾಹಿ ಹಾಡು ರಿಲೀಸ್ ಆಗಿದೆ. ಈ ಹಾಡನ್ನು ಹಲವು ಭಾಷೆಗಳಲ್ಲಿ ರಿಲೀಸ್ ಮಾಡಲಾಗಿದೆ. ಕನ್ನಡದಲ್ಲಿ ಈ ಹಾಡಿಗೆ ಯೋಗರಾಜ್ ಭಟ್ಟರ ಸಾಹಿತ್ಯ ಸಿಕ್ಕಿದೆ.
ಸಿನಿಮಾದಲ್ಲಿ ಒಟ್ಟಾರೆ ಆರು ಹಾಡುಗಳಿವೆ. ಐದು ಮ್ಯೂಸಿಕ್ ಡೈರೆಕ್ಟರ್ಸ್ ಇದ್ದಾರೆ, ಬಾಲಿವುಡ್‌ನ ನಿರ್ದೇಶಕ ವಿಶಾಲ್ ಮಿಶ್ರಾ ನಾಲ್ಕು ಹಾಡನ್ನು ಸಂಯೋಜಿಸಿದ್ದಾರೆ.
ಸದ್ಯ ಭಟ್ಟರ ಸಾಹಿತ್ಯವಿರುವ ಹಾಡನ್ನು ರಿಲೀಸ್ ಮಾಡಲಾಗಿದೆ. ಈಗಾಗಲೇ ಜನ ಇದನ್ನು ಕೇಳಿದ್ದು ಲಿರಿಕ್ಸ್ ಸೂಪರ್ ಎಂದಿದ್ದಾರೆ. ‘ಟಾಕ್ಸಿಕ್’ ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಹುತೇಕ ಕೆಲಸ ಪೂರ್ಣಗೊಂಡಿದ್ದು, ರಿಲೀಸ್ ಮಾತ್ರ ಬಾಕಿ ಉಳಿದುಕೊಂಡಿದೆ. ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗಾಗಿ ಹೆಚ್ಚು ನಿರೀಕ್ಷೆ ಚಿತ್ರದ ಮೇಲಿದೆ.



