ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜನವರಿ 8ರಂದು ʻರಾಕಿಂಗ್ ಸ್ಟಾರ್ʼ ಯಶ್ ಅವರಿಗೆ ಹುಟ್ಟುಹಬ್ಬ. ಈಗಾಗಲೇ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಇದೇ ಮೊದಲ ಬಾರಿಗೆ ಮೆಟ್ರೋ ಮೇಲೆ ಜಾಹೀರಾತು ನೀಡಿ, ಯಶ್‌ಗೆ ಹುಟ್ಟುಹಬ್ಬ ಶುಭಾಶಯಗಳನ್ನು ತಿಳಿಸಿದ್ದಾರೆ.
ಯಶ್ ಅವರ ಸ್ನೇಹಿತರು ನಮ್ಮ ಮೆಟ್ರೋ ಮೇಲೆ ರಾಕಿ ಭಾಯ್‌ಗೆ ಹುಟ್ಟುಹಬ್ಬ ಶುಭಾಶಯಗಳನ್ನು ಕೋರುತ್ತಿರುವ ಪೋಸ್ಟರ್‌ಗಳನ್ನು ಅಂಟಿಸಿ, ಜಾಹೀರಾತು ನೀಡಿದ್ದಾರೆ. ಇದೇ ಮೊದಲ ಬಾರಿಗೆ ಇಂಥ ಪ್ರಯೋಗ ನಡೆದಿರುವುದು ವಿಶೇಷ.
ಸದ್ಯ ಬೆಂಗಳೂರಿನ ಮೆಟ್ರೋಗಳಲ್ಲಿ ಯಶ್ ಅವರ ಹುಟ್ಟುಹಬ್ಬದ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಅಣ್ತಮ್ಮನ ಸ್ನೇಹಿತರು ಯಶ್ ಹುಟ್ಟುಹಬ್ಬದ ಮೆರುಗನ್ನು ಈ ಬಾರಿ ಹೆಚ್ಚಿಸಿದ್ದಾರೆ ಎನ್ನಬಹುದು. ಜೊತೆಗೆ ಹೈವೇಗಳಲ್ಲಿ ದೊಡ್ಡ ಜಾಹೀರಾತು ಬೋರ್ಡ್‌ಗಳಲ್ಲಿಯೂ ಯಶ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಫ್ಲೆಕ್ಸ್ ಹಾಕಲಾಗಿದೆ.
ಇನ್ನು, ಯಶ್ ಅವರ ಮುಂದಿನ ಸಿನಿಮಾ ʻಟಾಕ್ಸಿಕ್ʼನ ನಾಯಕಿಯ ಪರಿಚಯದ ಒಂದೊಂದೇ ಪೋಸ್ಟರ್‌ಗಳು ರಿಲೀಸ್ ಆಗುತ್ತಿವೆ. ಇದೀಗ ಜನವರಿ 8ರಂದು ಯಶ್ ಅವರ ಹುಟ್ಟುಹಬ್ಬಕ್ಕೆ ಏನಾದರೂ ಗಿಫ್ಟ್ ಸಿಗಬಹುದಾ ಎಂಬ ಕುತೂಹಲ ಫ್ಯಾನ್ಸ್‌ಗೆ ಕಾಡುತ್ತಿದೆ.

