February 1, 2026
Sunday, February 1, 2026
spot_img

ಬಡವರಿಂದ ದೂರ, ಶ್ರೀಮಂತರಿಗೆ ಹತ್ತಿರ: ಬಜೆಟ್ ಕುರಿತು ಅಖಿಲೇಶ್ ಯಾದವ್ ಟೀಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರ ಮಂಡಿಸಿರುವ 2026-27ರ ಸಾಲಿನ ಬಜೆಟ್ ಗ್ರಾಮೀಣ ಬಡವರ ಅಗತ್ಯಗಳನ್ನು ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಮಾಜವಾದಿ ಪಕ್ಷದ (SP) ಸಂಸದ ಅಖಿಲೇಶ್ ಯಾದವ್ ತೀವ್ರವಾಗಿ ಟೀಕಿಸಿದ್ದಾರೆ.

ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಜೆಟ್ ಸಾಮಾನ್ಯ ಜನರ ಹಿತಾಸಕ್ತಿಯನ್ನು ಮರೆತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. “ಈ ಬಾರಿಯ ಬಜೆಟ್ ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಮತ್ತು ಬಡವರಿಗೆ ಅರ್ಥವಾಗದ ಗೋಜಲಾಗಿ ಪರಿಣಮಿಸಿದೆ. ಇದರಲ್ಲಿ ಯಾವುದೇ ಉದ್ಯೋಗಾವಕಾಶಗಳ ಸೃಷ್ಟಿಯ ಬಗ್ಗೆ ಪ್ರಸ್ತಾಪವಿಲ್ಲ. ಬಿಜೆಪಿ ಸರ್ಕಾರ ಮಂಡಿಸಿರುವ ಈ ಬಜೆಟ್ ಕೇವಲ ದೇಶದ ಶೇ. 5 ರಷ್ಟು ಶ್ರೀಮಂತ ವರ್ಗದ ಜನರಿಗಾಗಿ ಮಾತ್ರ ರೂಪಿತವಾಗಿದೆ,” ಎಂದು ಯಾದವ್ ಕಿಡಿಕಾರಿದರು.

ಗ್ರಾಮೀಣ ಭಾಗದ ಆರ್ಥಿಕತೆಯನ್ನು ಸುಧಾರಿಸಲು ಅಥವಾ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಯಾವುದೇ ಶಕ್ತಿಯುತ ಯೋಜನೆಗಳು ಈ ಬಜೆಟ್‌ನಲ್ಲಿ ಕಂಡುಬರುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !