April 3, 2026
Friday, April 3, 2026
spot_img

ಬೇರೆ ಧರ್ಮದ ಹುಡುಗಿ ಇಷ್ಟವಿಲ್ಲ, ಈ ಮದುವೆಯನ್ನು ನಾವು ಒಪ್ಪೋದಿಲ್ಲ ಎಂದ ಫರ್ಮಾನ್ ಖಾನ್ ತಂದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕುಂಭಮೇಳದಿಂದ ಫೇಮಸ್‌ ಆದ ಮೊನಾಲಿಸಾ ಇದೀಗ ಮದುವೆ ವಿಚಾರಕ್ಕೆ ಮತ್ತೆ ಫೇಮಸ್‌ ಆಗಿದ್ದಾರೆ, ಕೇರಳದಲ್ಲಿ ಹಿಂದು ಪದ್ಧತಿಯಂತೆ ಮುಸ್ಲಿಂ ಯುವಕ ಫರ್ಮಾನ್‌ ಖಾನ್‌ ಜತೆ ಸಪ್ತಪದಿ ತುಳಿದಿದ್ದಾರೆ.

ಈ ಮದುವೆ ಬಗ್ಗೆ ಭಾರೀ ಮಾತುಕತೆಗಳು ಬರುತ್ತಿವೆ, ಇದರ ಬೆನ್ನಲ್ಲೇ ಮೊನಾಲಿಸಾರನ್ನು ಸೊಸೆ ಅಂತ ಒಪ್ಪಿಕೊಳ್ಳೋದಿಲ್ಲ ಎಂದು ಮೊನಾಲಿಸಾ ಪತಿ ಫರ್ಮಾನ್ ಖಾನ್ ತಂದೆ ಖಡಕ್‌ ಆಗಿ ಹೇಳಿದ್ದಾರೆ.

ಮಗ ಮದುವೆ ಆಗ್ತಿದ್ದಾನೆ ಅನ್ನೋ ವಿಷಯವೇ ನಮಗೆ ಗೊತ್ತಿಲ್ಲ, ನಾವು ಟಿವಿಯಲ್ಲಿ ನೋಡಿದ್ದು, ಆಕೆ ಬೇರೆ ಧರ್ಮದ ಹುಡುಗಿ ಹೀಗಾಗಿ ನಮಗೆ ಮದುವೆ ಒಪ್ಪಿಗೆ ಇಲ್ಲ ಎಂದಿದ್ದಾರೆ.

ಫರ್ಮಾನ್‌ ನಮ್ಮೂರಿಗೆ ಬರುತ್ತಿದ್ದುದೇ ಅಪರೂಪ, ಬಂದಾಗಲೂ ಮದುವೆ ಬಗ್ಗೆ ತಿಳಿಸಿಲ್ಲ. ಅವನು ಮಾಡಿದ್ದು ತಪ್ಪು, ನಾವು ಇದಕ್ಕೆ ಒಪ್ಪುವ ಮಾತೇ ಇಲ್ಲ. ನಮ್ಮ ಬಳಿ ಮಾತನಾಡಬೇಕಿತ್ತು ಎಂದು ಜಫರ್‌ ಅಲಿ ಬೇಸರಿಸಿಕೊಂಡಿದ್ದಾರೆ..

ಫರ್ಮಾನ್‌ ಮೊನಾಲಿಸಾ ಜೊತೆ ಸಿನಿಮಾ ಮಾಡ್ತಿದ್ದ ಅನ್ನೋ ವಿಚಾರ ಗೊತ್ತಿತ್ತು ಆದರೆ ಮದುವೆ ಬಗ್ಗೆ ಸುಳಿವೂ ಇರಲಿಲ್ಲ. ಮನೆಯವರಿಗೆ ಶಾಕ್‌ ನೀಡಿದ್ದಾರೆ ಎಂದು ಫರ್ಮಾನ್‌ ಸಹೋದರ ಶಮದ್‌ ಹೇಳಿದ್ದಾರೆ.

ನಾನು ನನ್ನ ಪತಿ ಫರ್ಹಾನ್‌ ಕೇರಳದಲ್ಲಿಯೇ ಇರುತ್ತೇವೆ, ಪೊಲೀಸ್‌ ರಕ್ಷಣೆಯಲ್ಲಿ ವಿವಾಹ ಆಗಿದ್ದೇವೆ. ಯಾರು ಯಾರನ್ನೂ ಮತಾಂತರ ಮಾಡಿಲ್ಲ, ಮಾಡುವುದೂ ಇಲ್ಲ. ಅವರವರ ಧರ್ಮವನ್ನು ಅವರವರು ಉಳಿಸಿಕೊಂಡು ಹೋಗುತ್ತೇವೆ. ಎಲ್ಲದಕ್ಕಿಂತ ಪ್ರೀತಿ ಮುಖ್ಯ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !