ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯನ್ನು ಸೀಝ್ ಮಾಡಿಬಿಡ್ತೀವಿ ಎಂದು ಫೈನಾನ್ಸ್ ಸಿಬ್ಬಂದಿ ಬೆದರಿಕೆ ಹಾಕಿದ್ದು, ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಶ್ರವಣಬೆಳಗೊಳದ ಕೊತ್ತನಘಟ್ಟ ಗ್ರಾಮದಲ್ಲಿ ಘಟನೆ ಸಂಭವಿಸಿದೆ. 50 ವರ್ಷದ ಯೋಗೇಶ್ ಚನ್ನಪಟ್ಟಣದ ಫೈನಾನ್ಸ್ ಒಂದರಲ್ಲಿ ಏಳು ಲಕ್ಷ ರೂ. ಸಾಲ ಪಡೆದಿದ್ದರು. ತಿಂಗಳು ತಿಂಗಳು ಕಂತು ಕಟ್ಟಿದ್ದರು. ಎರಡು ತಿಂಗಳಿನಿಂದ ವೈಯಕ್ತಿಕ ಸಮಸ್ಯೆಗಳು ಹೆಚ್ಚಾಗಿದ್ದು, ಕಂತು ಕಟ್ಟಲು ಆಗಿರಲಿಲ್ಲ.
ಫೈನಾನ್ಸ್ ಸಿಬ್ಬಂದಿ ರಾತ್ರೋ ರಾತ್ರಿ ಮನೆಗೆ ನುಗ್ಗಿ ಮನೆ ಸೀಝ್ ಮಾಡಿಬಿಡ್ತೀವಿ. ಸರಿಯಾಗಿ ಹಣ ಕಟ್ಟಿ ಎಂದು ಅವಾಝ್ ಹಾಕಿ ಹೋಗಿದ್ದರು. ಮಾನ ಮರ್ಯಾದಿ ಹೋಯಿತೆಂದು ಬೇಸರಿಸಿಕೊಂಡಿದ್ದ ಯೋಗೇಶ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.



