ಫ್ಯಾಷನ್ ಎಂದರೆ ಕೇವಲ ಟ್ರೆಂಡ್ ಫಾಲೋ ಮಾಡೋದೇ ಅಲ್ಲ, ನಿಮ್ಮ ವ್ಯಕ್ತಿತ್ವವನ್ನು ತೋರಿಸುವ ಶೈಲಿ. ಅದರಲ್ಲೂ ಜೀನ್ಸ್ ಎಂದರೆ ಯಾವ ಕಾಲಕ್ಕೂ ಹಳತಾಗದ ಉಡುಪು. ಆದರೆ ಪ್ರತೀ ಸೀಸನ್‌ಗೆ ಟ್ರೆಂಡ್ ಬದಲಾಗುತ್ತಲೇ ಇರುತ್ತದೆ. ಇತ್ತೀಚೆಗೆ ಯುವಜನರಷ್ಟೇ ಅಲ್ಲ, ಫ್ಯಾಷನ್ ಪ್ರಿಯ ಎಲ್ಲ ವಯಸ್ಸಿನವರ ಗಮನ ಸೆಳೆಯುತ್ತಿರುವ ಕೆಲ ಜೀನ್ಸ್ ಸ್ಟೈಲ್‌ಗಳು ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ನೀವು ಕೂಡ ಈ ಟ್ರೆಂಡಿಂಗ್ ಜೀನ್ಸ್‌ಗಳನ್ನು ಟ್ರೈ ಮಾಡಿದ್ದೀರಾ? ಇಲ್ಲಿದೆ ಈಗ ಟ್ರೆಂಡ್‌ನಲ್ಲಿರುವ ಜೀನ್ಸ್‌ಗಳ ಸಂಪೂರ್ಣ ಮಾಹಿತಿ.
Wide Leg Jeans: ಕಂಫರ್ಟ್‌ಗೆ ಪ್ರಾಮುಖ್ಯತೆ ನೀಡುವವರಿಗೆ ವೈಡ್ ಲೆಗ್ ಜೀನ್ಸ್ ಫಸ್ಟ್ ಚಾಯ್ಸ್ ಆಗಿದೆ. ಸ್ಕಿನ್ನಿ ಜೀನ್ಸ್‌ನಿಂದ ಬೇಸತ್ತವರಿಗೆ ಇದು ಸ್ಟೈಲ್ ಜೊತೆಗೆ ಆರಾಮವನ್ನೂ ನೀಡುತ್ತದೆ.

Baggy Jeans: 90ರ ದಶಕದ ಫ್ಯಾಷನ್ ಮತ್ತೆ ಕಂಬ್ಯಾಕ್ ಆಗಿದೆ. ಬ್ಯಾಗಿ ಜೀನ್ಸ್ ಈಗ ಕಾಲೇಜ್ ವಿದ್ಯಾರ್ಥಿಗಳಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಫೇವರಿಟ್.

Straight Fit Jeans: ಕ್ಲಾಸಿಕ್ ಸ್ಟೈಲ್ ಪ್ರಿಯರಿಗೆ ಸ್ಟ್ರೈಟ್ ಫಿಟ್ ಜೀನ್ಸ್ ಯಾವತ್ತೂ ಸೇಫ್ ಆಯ್ಕೆ. ಆಫೀಸ್, ಕ್ಯಾಜುಯಲ್ ಔಟಿಂಗ್ ಎರಡಕ್ಕೂ ಇದು ಸೂಕ್ತ.

Distressed / Ripped Jeans: ಸ್ವಲ್ಪ ರಫ್ & ಟಫ್ ಲುಕ್ ಬೇಕು ಅಂದ್ರೆ ರಿಪ್ಡ್ ಜೀನ್ಸ್ ಬೆಸ್ಟ್. ಅತಿಯಾದ ಕಟ್ ಇಲ್ಲದ ಮಿನಿಮಲ್ ಡಿಸೈನ್‌ಗಳು ಈಗ ಹೆಚ್ಚು ಟ್ರೆಂಡ್‌ನಲ್ಲಿವೆ.

High Waist Jeans: ಬಾಡಿ ಶೇಪ್ ಅನ್ನು ಚೆನ್ನಾಗಿ ಹೈಲೈಟ್ ಮಾಡುವ ಹೈ ವೇಸ್ಟ್ ಜೀನ್ಸ್ ಯುವತಿಯರಲ್ಲಿ ಹೆಚ್ಚು ಜನಪ್ರಿಯ. ಟಕ್-ಇನ್ ಟಾಪ್ ಅಥವಾ ಕ್ರಾಪ್ ಟಾಪ್ ಜೊತೆ ಇದನ್ನು ಧರಿಸಿದರೆ ಎಲಿಗಂಟ್ ಲುಕ್ ಸಿಗುತ್ತದೆ.

ಇದನ್ನೂ ಓದಿ: ಕೊಂಡಗಟ್ಟುವಿನಲ್ಲಿ ಪವನ್ ಕಲ್ಯಾಣ್: TTD ಬೃಹತ್ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ!
ಒಟ್ಟಾರೆ, ಈಗಿನ ಜೀನ್ಸ್ ಟ್ರೆಂಡ್‌ಗಳು ಕಂಫರ್ಟ್, ಸ್ಟೈಲ್ ಮತ್ತು ಆತ್ಮವಿಶ್ವಾಸಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ನಿಮ್ಮ ಸ್ಟೈಲ್‌ಗೆ ತಕ್ಕಂತೆ ಟ್ರೆಂಡ್ ಆಯ್ಕೆ ಮಾಡಿಕೊಂಡರೆ, ಸಿಂಪಲ್ ಜೀನ್ಸ್ ಕೂಡ ಫ್ಯಾಷನ್ ಸ್ಟೇಟ್ಮೆಂಟ್ ಆಗುತ್ತದೆ. ಈ ಎಲ್ಲಾ ಜೀನ್ಸ್ ಸ್ಟೈಲ್ ಗಳಿಗೆ ಪುರುಷರು ಮಹಿಳೆಯರು ಅನ್ನೋ ಬೇಧವಿಲ್ಲ ಎಲ್ಲರಿಗೂ ಸೂಟ್ ಆಗುತ್ತೆ ಅನ್ನೋದು ಕೂಡ ಗೊತ್ತಿರಲಿ.

