ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಯುವ ಜನರಲ್ಲಿ ಹೃದಯಾಘಾತ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ಜಿಮ್‌ಗಳಲ್ಲಿ ವ್ಯಾಯಾಮ ಮಾಡುವಾಗ, ಮದುವೆ ಸಮಾರಂಭಗಳಲ್ಲಿ ನೃತ್ಯ ಮಾಡುವಾಗಲೂ ಕುಸಿದುಬೀಳುವ ಘಟನೆಗಳು ಕಣ್ಣ ಮುಂದಿವೆ. ಈ ಕಳವಳಕಾರಿ ಪ್ರವೃತ್ತಿಗೆ ಮತ್ತೊಂದು ಸೇರ್ಪಡೆಯೆಂಬಂತೆ, ಕೋನಸೀಮಾದಲ್ಲಿ ತರಗತಿಯಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.
ನಲ್ಲಮಿಲ್ಲಿ ಸಿರಿ ಎಂಬ ವಿದ್ಯಾರ್ಥಿನಿ ಈ ಆಘಾತಕಾರಿ ಘಟನೆಗೆ ಬಲಿಯಾಗಿದ್ದಾಳೆ. ಈ ದುರಂತವು ತರಗತಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶನಿವಾರ ಬೆಳಗ್ಗೆ 9:45ರ ಸುಮಾರಿಗೆ ಘಟನೆ ನಡೆದಿದೆ.
ಮೊದಲ ಬೆಂಚಿನಲ್ಲಿ ಕುಳಿತಿದ್ದ ಸಿರಿ ಇದ್ದಕ್ಕಿದ್ದಂತೆ ಕುಸಿದುಬೀಳುತ್ತಾಳೆ. ಯುವ ವಯಸ್ಸಿನಲ್ಲೇ ಹೃದಯಾಘಾತದಂತಹ ಪ್ರಾಣಾಂತಿಕ ಘಟನೆಗಳು ನಡೆಯುತ್ತಿರುವುದು, ಯುವ ಸಮುದಾಯದ ಆರೋಗ್ಯದ ಕುರಿತು ಗಂಭೀರ ಚಿಂತನೆಗೆ ಹಚ್ಚಿದೆ. ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ವೈದ್ಯಕೀಯ ಲೋಕಕ್ಕೂ ಒಂದು ಸವಾಲಾಗಿದೆ.

