Friday, November 7, 2025

ಐದು ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯಗೆ ಶರಣಾದ ತಂದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐದು ವರ್ಷದ ಮಗಳನ್ನು ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮುಡಿಯನೂರಿನಲ್ಲಿ ನಡೆದಿದೆ.

ಮುಡಿಯನೂರು ಗ್ರಾಮ ಲೋಕೇಶ್ (37) ಆತ್ಮಹತ್ಯೆಗೆ ಶರಣಾದ ತಂದೆ. ನಿಹಾರಿಕ (5) ಮೃತ ಮಗಳು. ಕೌಟುಂಬಿಕ ಕಲಹದಿಂದ ಲೋಕೇಶ್ ಪತ್ನಿ ಮನೆಯಿಂದ ಕಾಣೆಯಾಗಿದ್ದರು. ಪತ್ನಿ ಕಾಣೆಯಾದ ಹಿನ್ನೆಲೆ ಮನನೊಂದು ಲೋಕೇಶ್ ಮಗಳು ನಿಹಾರಿಕಳನ್ನು ಉಸಿರುಗಟ್ಟಿಸಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. 

ಬಳಿಕ ಮಗಳ ಶವ ಕಾರಲ್ಲಿಟ್ಟು ಲೋಕೇಶ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

error: Content is protected !!