ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಡಿತದ ಚಟ ಬಿಡುವಂತೆ ಒತ್ತಾಯಿಸಿದ್ದಕ್ಕೆ ಮಗಳ ಕಣ್ಣಿಗೆ ಮೆಣಸಿನ ಪುಡಿ ಎರಚಿ, ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ.
ಗ್ವಾಲಿಯರ್‌ನ ಜನಕ್‌ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, ಆರೋಪಿಯನ್ನು ಬಾದಮ್ ಸಿಂಗ್ ಕುಶ್ವಾಹ ಎಂದು ಗುರುತಿಸಲಾಗಿದ್ದು, ಮೃತಳನ್ನು ರಾಣಿ ಕುಶ್ವಾಹ ಎಂದು ಗುರುತಿಸಲಾಗಿದೆ.
ಮಗಳ ಮೇಲೆ ಚಾಕುವಿನಿಂದ ಹಲ್ಲೆ ಮಾಡುವ ಮೊದಲು, ಆಕೆಯ ಕಣ್ಣಿಗೆ ಮೆಣಸಿನ ಪುಡಿಯನ್ನು ಎರಚಿ ಬಳಿಕ ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ರಾಣಿಯ ತಾಯಿ ಭಗವತಿ ಬಾಯಿ ನೀಡಿರುವ ಮಾಹಿತಿ ಪ್ರಕಾರ, ಬಾದಮ್ ಸಿಂಗ್ ದಿವ್ಯಾಂಗ, ಒಂದು ಕಾಲಿನ ಸ್ವಾಧೀನವಿಲ್ಲ. ಮೊದಲು ಅವರು ಆಟೋ ಓಡಿಸುತ್ತಿದ್ದ, ಆದರೆ ಲಾಕ್‌ಡೌನ್ ಸಮಯದಲ್ಲಿ ಅಪಘಾತದ ನಂತರ, ಕಾಲು ಕಳೆದುಕೊಂಡರು ಮತ್ತು ನಂತರ ಮನೆಯಲ್ಲಿಯೇ ಇದ್ದರು.
ಜೀವನೋಪಾಯಕ್ಕಾಗಿ ಕುಟುಂಬವು ಒಂದು ಸಣ್ಣ ದಿನಸಿ ಅಂಗಡಿಯನ್ನು ನಡೆಸಲು ಪ್ರಾರಂಭಿಸಿತು, ಅದನ್ನು ಕಿರಿಯ ಮಗಳು ನಿರ್ವಹಿಸುತ್ತಿದ್ದಳು. ಆ ವ್ಯಕ್ತಿ ಆಗಾಗ ಅಂಗಡಿಯಲ್ಲಿ ಕುಳಿತು, ನಗದು ಕೌಂಟರ್‌ನಿಂದ ಹಣವನ್ನು ತೆಗೆದುಕೊಂಡು ಮದ್ಯಕ್ಕಾಗಿ ಖರ್ಚು ಮಾಡುತ್ತಿದ್ದ. ರಾಣಿ ತನ್ನ ತಂದೆ ಅಂಗಡಿಯಿಂದ ಹಣ ತೆಗೆದುಕೊಂಡಿದ್ದನ್ನು ವಿರೋಧಿಸಿದಾಗ, ಕೋಪಗೊಂಡ ತಂದೆ ಆಕೆಯ ಕಣ್ಣಿಗೆ ಮೆಣಸಿನ ಪುಡಿ ಎಸೆದು ಇರಿದು ಕೊಂದಿದ್ದಾನೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ತಂದೆಯನ್ನು ತಕ್ಷಣ ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಆಗಾಗ ನಡೆಯುತ್ತಿದ್ದ ಕೌಟುಂಬಿಕ ಕಲಹಗಳು ಮತ್ತು ತಂದೆಯ ಮದ್ಯದ ಚಟ ಈ ಅಪರಾಧಕ್ಕೆ ಕಾರಣ ಎನ್ನಲಾಗಿದೆ. ಪೊಲೀಸರು ಆರೋಪಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.