ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದಲ್ಲಿ ನಡೆದ ಎರಡನೇ ಮಹಾಯುದ್ಧದ ವಿಕ್ಟರಿ ಪರೇಡ್ ನಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪಾಲ್ಗೊಂಡಿದ್ದು ಈ ಕಾರ್ಯಕ್ರಮದ ಬಳಿಕ ಉತ್ತರ ಕೊರಿಯಾ ಸಿಬ್ಬಂದಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮುಟ್ಟಿದ ಪ್ರತಿಯೊಂದು ವಸ್ತುವನ್ನು ಉತ್ತರ ಕೊರಿಯಾದ ಸಿಬ್ಬಂದಿ ತರಾತುರಿಯಲ್ಲಿ ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡಿರುವುದು ಗಮನ ಸೆಳೆದಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.
https://x.com/runews/status/1963149343759683951?ref_src=twsrc%5Etfw%7Ctwcamp%5Etweetembed%7Ctwterm%5E1963149343759683951%7Ctwgr%5E46ae94f9f4fd73126f822884d55344db8b864bca%7Ctwcon%5Es1_&ref_url=https%3A%2F%2Fvijaykarnataka.com%2Fnews%2Fworld%2Fnorth-koreas-great-cleanup-kim-jong-un-aided-erase-dna-after-talks-with-russia-vladimir-putin%2Farticleshow%2F123679463.cms
ಬೀಜಿಂಗ್‌ನಲ್ಲಿ ನಡೆದ ಮಿಲಿಟರಿ ಮೆರವಣಿಗೆಯ ನಂತರ ಕಿಮ್ ಜಾಂಗ್-ಉನ್ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದರು. ಸಭೆಯ ನಂತರ ಸಾಮಾಜಿಕ ಮಾಧ್ಯಮ ತಾಣ ‘ಎಕ್ಸ್’ ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಉತ್ತರ ಕೊರಿಯಾದ ಅಧಿಕಾರಿಯೊಬ್ಬರು ಕಿಮ್ ಕುಳಿತಿದ್ದ ಕುರ್ಚಿಯನ್ನು ಎಚ್ಚರಿಕೆಯಿಂದ ಒರೆಸುತ್ತಿರುವುದನ್ನು ತೋರಿಸಲಾಗಿದೆ. ವಿಧಿವಿಜ್ಞಾನ ತಜ್ಞರಂತೆ ವರ್ತಿಸುವ ಮತ್ತೊಬ್ಬ ಅಧಿಕಾರಿ, ಕಿಮ್ ತಟ್ಟೆಯಲ್ಲಿ ಬಳಸಿದ ಗಾಜಿನ ಕಪ್ ಅನ್ನು ಒಯ್ಯುತ್ತಾರೆ.ಕುರ್ಚಿಯ ಎಲ್ಲ ಭಾಗಗಳು, ಕಿಮ್ ಜಾಂಗ್ ಉನ್ ಓಡಾಡಿದ ಹೊದಿಕೆ, ಪಕ್ಕದ ಟೇಬಲ್ ಅನ್ನು ಕೂಡ ಒರೆಸಿ ಸ್ವಚ್ಛಗೊಳಿಸಿದರು. ಈ ಮೂಲಕ ಉತ್ತರ ಕೊರಿಯಾದ ನಾಯಕನ ಉಪಸ್ಥಿತಿಯ ಯಾವುದೇ ಕುರುಹು ಇಲ್ಲದಂತೆ ಒರೆಸಲಾಯಿತು.
ಈ ಕ್ರಮಕ್ಕೆ ನಿಖರವಾದ ಕಾರಣ ಸ್ಪಷ್ಟವಾಗಿಲ್ಲ, ಆದಾಗ್ಯೂ, ಜೆನೆಟಿಕ್ (ಡಿಎನ್‌ಎ) ಕಳ್ಳತನವನ್ನು ತಪ್ಪಿಸಲು ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮವಾಗಿರಬಹುದು ಎಂದು ಅನೇಕ ತಜ್ಞರು ನಂಬುತ್ತಾರೆ.