March 3, 2026
Tuesday, March 3, 2026
spot_img

ಮದ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ: ಖಾಸಗಿ ಜೆಟ್ ನಲ್ಲಿ ಸೌದಿ ತೊರೆದ ಕ್ರಿಸ್ಟಿಯಾನೋ ರೋನಾಲ್ಡೋ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ಇರಾನ್ ಮೇಲಿನ ದಾಳಿ ಬಳಿಕ ಇರಾನ್ ದುಬೈ, ಅದುಧಾಬಿ, ಬಹ್ರೈನ್, ಸೌದಿ ಅರೇಬಿಯಾ ಸೇರಿದಂತೆ ಮದ್ಯಪ್ರಾಚ್ಯ ದೇಶಗಳ ಅಮೆರಿಕ ಸೇನಾ ನೆಲೆ, ಅಮೆರಿಕ ಕಚೇರಿಗಳ ಮೇಲೆ ದಾಳಿಮಾಡುತ್ತಿದೆ.ಈ ದಾಳಿಯಿಂದ ಸೌದಿ ಅರೆಬಿಯಾ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳ ಜನ ಆತಂಕಗೊಂಡಿದ್ದಾರೆ.

ರಿಯಾದ್‌ನಲ್ಲಿನ ದಾಳಿ ಬೆನ್ನಲ್ಲೇ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೋನಾಲ್ಡೋ ಸೌದ ಅರೆಬಿಯಾ ತೊರೆದಿದ್ದಾರೆ. ತಮ್ಮ 750 ಕೋಟಿ ರೂಪಾಯಿ ಮೌಲ್ಯದ ಖಾಸಗಿ ಜೆಟ್ ಮೂಲಕ ತಮ್ಮ ಕುಟುಂಬ ಸಮೇತ ಸೌದಿ ತೊರೆದೆ ಯೂರೋಪ್ ಸೇರಿಕೊಂಡಿದ್ದಾರೆ.

41 ವರ್ಷದ ಕ್ರಿಸ್ಟಿಯಾನೋ ರೋನಾಲ್ಡೋ 2023ರಿಂದ ಸೌದಿ ಅರೆಬಿಯಾದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. . 2023ರಲ್ಲಿ ರೋನಾಲ್ಡೋ ಅಲ್ ನಾಸರ್ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಸೌದಿ ಲೀಗ್‌ನಲ್ಲಿ ಆಡುತ್ತಿರುವ ಕಾರಣ ರೋನಾಲ್ಡೋ ಸೌದಿಯಲ್ಲೇ ಬೀಡು ಬಿಟ್ಟಿದ್ದಾರೆ. ಇದೀಗ ಅಲ್ ನಾಸರ್ ಕ್ಲಬ್‌ಗೆ ತಾತ್ಕಾಲಿಕ ಬ್ರೇಕ್ ನೀಡಿ ಯೂರೋಪ್‌ಗೆ ಹಾರಿದ್ದಾರೆ.

ಇರಾನ್, ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಈ ಘಟನೆಗಳ ನಂತರ ರೊನಾಲ್ಡೊ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !