January21, 2026
Wednesday, January 21, 2026
spot_img

ಕಟ್ಟಡ ನಿಯಮ ಮುರಿದವರಿಗೆ ‘ದಂಡ’ ಭಾಗ್ಯ: ಲೀಗಲ್‌ ಆಗಲಿದೆ ‘ಅಕ್ರಮ’ ಕಟ್ಟಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ಮನೆ ಅಥವಾ ಕಟ್ಟಡ ಕಟ್ಟಿದವರಿಗೆ ರಾಜ್ಯ ಸರ್ಕಾರವು ಮಹತ್ವದ ‘ಗುಡ್ ನ್ಯೂಸ್’ ನೀಡಿದೆ. ನಿರ್ದಿಷ್ಟ ಮಿತಿಯೊಳಗೆ ನಿಯಮ ಉಲ್ಲಂಘನೆ ಮಾಡಿರುವ ಕಟ್ಟಡಗಳಿಗೆ ವಿನಾಯಿತಿ ನೀಡಿ, ದಂಡವನ್ನು ಪಾವತಿಸಿ ಪರಿಷ್ಕೃತ ನಕ್ಷೆ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ.

ಪ್ರಮುಖ ನಿರ್ಧಾರಗಳು:

ಮಿತಿ ನಿಗದಿ: ಈ ಸೌಲಭ್ಯವು ಕೇವಲ ಶೇ.15ರ ಮಿತಿಯೊಳಗೆ ನಿಯಮ ಉಲ್ಲಂಘನೆ ಮಾಡಿದ ಕಟ್ಟಡಗಳಿಗೆ ಮಾತ್ರ ಅನ್ವಯವಾಗುತ್ತದೆ.

ಯಾವುದಕ್ಕೆ ಅವಕಾಶ?

ಕಟ್ಟಡದ ಸೆಟ್‌ಬ್ಯಾಕ್ ಮತ್ತು ಕಾರ್ ಪಾರ್ಕಿಂಗ್ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳಿಗೆ ದಂಡ ಕಟ್ಟಿ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಕಾರ್ ಪಾರ್ಕಿಂಗ್ ದಂಡ: ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಾರ್ ಪಾರ್ಕಿಂಗ್ ನಿಯಮ ಉಲ್ಲಂಘನೆ ಮಾಡಿದರೆ, ಏಕರೂಪವಾಗಿ ರೂ. 5,000 ದಂಡವನ್ನು ನಿಗದಿಪಡಿಸಲಾಗಿದೆ.

ಇತರೆ ದಂಡ: ಶೇ.15ರ ಮಿತಿಯೊಳಗೆ ಸೆಟ್‌ಬ್ಯಾಕ್ ಮತ್ತು ಇತರ ನಿಯಮಗಳ ಉಲ್ಲಂಘನೆಗೆ ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗನುಗುಣವಾಗಿ ದಂಡವನ್ನು ನಿಗದಿಪಡಿಸಲಾಗಿದೆ.

ಈ ಸರ್ಕಾರದ ಆದೇಶವು ನಿಯಮ ಉಲ್ಲಂಘನೆ ಮಾಡಿ ಕಟ್ಟಡ ಕಟ್ಟಿರುವ ಲಕ್ಷಾಂತರ ಮನೆ ಮಾಲೀಕರಿಗೆ ಒಂದು ದೊಡ್ಡ ಪರಿಹಾರ ಒದಗಿಸಲಿದೆ.

Must Read