ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುರುಬರ ಎಸ್ಟಿ ಮೀಸಲಾತಿಯ ಬಗ್ಗೆ ಮಾತನಾಡಿದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಮೈಸೂರಿನ ಕೆ.ಆರ್ ಕ್ಷೇತ್ರದ ಶಾಸಕ ಶ್ರೀವತ್ಸ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪರಿಶಿಷ್ಟ ಪಂಗಡ ಮತ್ತು ವಾಲ್ಮೀಕಿ ಸಮುದಾಯದವರು ಕುರುಬ ಸಮುದಾಯದ ಬಗ್ಗೆ ದಂಗೆ ಏಳಬೇಕು ಅಂತ ಎಂಎಲ್‌ಸಿ ಹಾಗೂ ಶಾಸಕರು ಹೇಳಿಕೆ ಕೊಟ್ಟಿದ್ದರು. ಈ ಸಂಬಂಧ ಕುರುಬ ಸಮುದಾಯದ ಮುಖಂಡ ಸಿದ್ದಣ್ಣ ತೇಜಿ, ಡಿಜಿ & ಐಜಿಪಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಬಿಎನ್‌ಎಸ್ 353(2) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.