Friday, January 23, 2026
Friday, January 23, 2026
spot_img

ವಿದ್ಯುತ್ ಶಾಟ್೯ ಸಕ್ಯೂ ೯ಟ್ ನಿಂದ ಅಗ್ನಿ ಅವಘಡ: ಸುಟ್ಟು ಕರಕಲಾದ ಪೀಠೋಪಕರಣಗಳು

ಹೊಸ ದಿಗಂತ ವರದಿ,ಹುಬ್ಬಳ್ಳಿ:

ವಿದ್ಯುತ್ ಶಾಟ್೯ ಸಕ್ಯೂ ೯ಟನಿಂದ ಅಗ್ನಿ ಅವಘಡವಾಗಿ 25 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಪೀಠೋಪಕರಣ, ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್, ಫೂಟ್‌ವೇರ್, ಬಟ್ಟೆ ಸಾಮಗ್ರಿ ಸೇರಿದಂತೆ ಇನ್ನಿತರೆ ವಸ್ತುಗಳ ಸುಟ್ಟು ಕರಕಲಾದ ಘಟನೆ ಮರಾಠಾ ಗಲ್ಲಿಯ ಮೆಟ್ರೋ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಸುಖಸಾಗರ ಮಾಲ್‌ನಲ್ಲಿ ರಮೀಜ್ ರಾಜಾ ಎಂಬುವರು ಮೆಟ್ರೋ ಮಾರ್ಕೆಟಿಂಗ್ ನಡೆಸುತ್ತಿದ್ದರು. ಮಳಿಗೆ ಬಂದ್‌ ಮಾಡಿಕೊಂಡು ಎಲ್ಲರೂ ಹೋಗಿದ್ದಾಗ ಈ ಅಗ್ನಿ ಅವಘಡ ಸಂಭವಿಸಿದೆ.

ಮಳಿಗೆಯಲ್ಲಿ 50ಲಕ್ಷ‌ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಬಗೆಯ ಗೃಹೋಪಯೋಗಿ ಸಾಮಗ್ರಿಗಳಿದ್ದವು. ಬೆಂಕಿ ಹತೋಟಿಗೆ ತಂದು ಸುಮಾರು 30ಲಕ್ಷ ರೂ.ಗೂ ಹೆಚ್ಚು ಸಾಮಗ್ರಿಗಳನ್ನು ಸಂರಕ್ಷಣೆ ಮಾಡಲಾಗಿದೆ. 20ಲಕ್ಷ ರೂ.ಗೂ ಹೆಚ್ಚು ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ಅಗ್ನಿಶಾಮಕ ದಳ ಮೂಲಗಳು ತಿಳಿಸಿವೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದಂತೆ ಅಗ್ನಿಶಾಮಕ ದಳ ಮತ್ತು ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.

Must Read