Sunday, October 19, 2025

ಬಾಂಗ್ಲಾದ ಢಾಕಾ ಏರ್ ಪೋರ್ಟ್ ನಲ್ಲಿ ಬೆಂಕಿ ಅವಘಡ: ವಿಮಾನ ಹಾರಾಟ ಸ್ಥಗಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶ ಢಾಕಾದ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಎಲ್ಲಾ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮಧ್ಯಾಹ್ನ 2.15ರ ಸುಮಾರಿಗೆ ಸಂಭವಿಸಿದೆ ಎಂದು ಬಿಮಾನ್ ಬಾಂಗ್ಲಾದೇಶ ಏರ್‌ಲೈನ್ಸ್ ವಕ್ತಾರ ಕೌಸರ್ ಮಹಮೂದ್ ಅವರನ್ನು ಉಲ್ಲೇಖಿಸಿ ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

ಘಟನೆಯ ನಂತರ, ವಿಮಾನ ನಿಲ್ದಾಣದ ಅಗ್ನಿಶಾಮಕ ಇಲಾಖೆ, ಬಾಂಗ್ಲಾದೇಶ ವಾಯುಪಡೆಯ ಅಗ್ನಿಶಾಮಕ ಘಟಕ ಮತ್ತು ಇತರ ಸಂಬಂಧಪಟ್ಟ ಏಜೆನ್ಸಿಗಳ ತಂಡಗಳು ತಕ್ಷಣವೇ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸಂಘಟಿತ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು ಎಂದು ಅವರು ಮಾಹಿತಿ ನೀಡಿದರು.

error: Content is protected !!