ಹೊಸದಿಗಂತ ವರದಿ, ಮುಂಡಗೋಡ:
ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ನಿರ್ಲಕ್ಷದಿಂದ ಕಸ ವಿಲೇವಾರಿ ಘಟಕದಲ್ಲಿರುವ ಕಸ ವಿಲೇವಾರಿಯ ಬೇಲಿಂಗ್ ಮಿಷನ್ ಶೆಡ್ ಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿಯಲ್ಲಿರುವ ಬೇಲಿಂಗ್ ಮಿಷನ್ ಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
ಘಟಕದಲ್ಲಿ ಬೆಂಕಿ ತಗುಲಿ ಬೆಂಕಿಯ ಹೋಗೆ ನೋಡಿ ಸಾರ್ವಜನಿಕರು, ಪಟ್ಟಣ ಪಂಚಾಯಿತಿಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು, ಆದ್ರೆ ಈ ವೇಳೆ ಪೋನ್ ರಿಸರ್ವ್ ಮಾಡದೆ ಇದ್ದಾಗ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಅಗ್ನಿಶಾಮಕದಳದವರನ್ನು ಸ್ಥಳಕ್ಕೆ ಕಳುಹಿಸಿದ್ದಾರೆ.
ಅಗ್ನಿಶಾಮಕದಳವರು ಬೆಂಕಿ ನಂದಿಸಲು ಹರಸಾಹಸ ಪಟ್ಟರು ಬೆಂಕಿ ಹತ್ತೋಟಿಗೆ ಬಾರದಿದ್ದಾಗ, ಜೆಸಿಬಿ ಯಂತ್ರ ನೀಡಲು ಪಟ್ಟಣ ಪಂಚಾಯತಿ ಗೆ ಅಗ್ನಿಶಾಮಕದಳವರು ಮತ್ತೆ ಪೋನ್ ಕರೆ ಮಾಡಿದರು ಆಗಲೂ ಸಹ ಇವರು ಪೋನ್ ರಿಸರ್ವ್ ಮಾಡಲಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ ಆವರಿಸಿದೆ ಎನ್ನಲಾಗಿದೆ.
ಒಂದುವರೆ ಗಂಟೆಗಳ ನಂತರ ಸ್ಥಳಕ್ಕೆ ಬಂದ ಪ.ಪಂ ಸಿಬ್ಬಂದಿಗಳು: ಪ.ಪಂ ಸಿಬ್ಬಂದಿಗಳು ಯಾರೂ ಪೋನ್ ರಿಸರ್ವ್ ಮಾಡದಿದ್ದಾಗ ತಹಶೀಲ್ದಾರ ಶಂಕರ ಗೌಡಿ ಅವರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಆಗ ತಹಶೀಲ್ದಾರ ಸೂಚನೆ ಮೇರೆಗೆ ಪ.ಪಂ ಸಿಬ್ಬಂದಿ ಸ್ಥಳಕ್ಕೆ ದಾವಿಸಿದರು.
ಕೆಟ್ಟನಿಂತ ಜೆಸಿಬಿ ಯಂತ್ರ: ಕಸ ವಿಲೇವಾರಿ ಘಟಕದ ಹತ್ತಿರವಿದ್ದ ಜೆಸಿಬಿ ಯಂತ್ರವನ್ನು ತರಲು ಹೋದಾಗ ಜೆಸಿಬಿ ಯಂತ್ರದ ಟಾಯರ್ ಪಂಚರ್ ಆಗಿತ್ತು. ನಂತರ ಅಗ್ನಿಶಾಮಕದಳದವರು ಹಾಗೂ ಪೌರ ಕಾರ್ಮಿಕರು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದರು.
ಸಾರ್ವಜನಿಕರಿಂದ ಆಕ್ರೋಶ: ಇಷ್ಟು ದೊಡ್ಡ ಅವಘಡ ಸಂಭಸಿದರೂ ಸಕಾಲದಲ್ಲಿ ಸ್ಥಳಕ್ಕೆ ಬಾರದ ಪಟ್ಟಣ ಪಂಚಾಯತಿಯ ಅಧಿಕಾರಿ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಸ ವಿಲೇವಾರಿ ಘಟಕದಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಟ್ಟಡ, ಯಂತ್ರಗಳು ಸೇರಿದಂತೆ ಅಲ್ಲಿ ನಾಲ್ಕು ಜನಕ್ಕೂ ಹೆಚ್ಚುವ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಇಷ್ಟೆಲ್ಲ ಅವಘಡ ಸಂಭವಿಸಿದರು ಯಾರೊಬ್ಬರೂ ಅಲ್ಲಿ ಇಲ್ಲವೆಂದತೆ ಉದ್ದೇಶ ಪೂರ್ವಕವಾಗಿ ಅಧಿಕಾರಿಗಳು ತಮ್ಮ ಲಾಭಕ್ಕಾಗಿ ಮಾಡಿಸಿದರೆ ಊರ ಜನರೆಲ್ಲ ಪೋನ್ ಕರೆ ಮಾಡಿದರು ಯಾಕೆ ಅಧಿಕಾರಿಗಳು ಸ್ಪಂದಿಸಿಲ್ಲ. ಹಾಗಾದರೆ ಉದ್ದೇಶ ಪೂರ್ವಕವಾಗಿ ಮಾಡಿಸಿದರೆ ಎಂಬ ಅನುಮಾನ ಜನರಲ್ಲಿ ಮೂಡಿದೆ. ಈ ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ತಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಪ.ಪಂ ಮಾಜಿ ಸದಸ್ಯರು ಜನರು ಮಾತನಾಡಿಕೊಳ್ಳುತ್ತಿದ್ದಾರೆ.


