ಹೊಸದಿಗಂತ ವರದಿ, ಯಲ್ಲಾಪುರ
ಪಟ್ಟಣದ ಐಬಿ ಬಳಿ ಅಂಗಡಿ ಹಾಗೂ ಗೋಡೌನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಕಾಯಿ, ಹಣ್ಣು , ಸಗಟು ಖರೀದಿ ಮಾಡುವ ಶಿವಾನಂದ ಮರಾಠಿ ದೊಡ್ಡಬೇಣ ಅವರಿಗೆ ಸೇರಿದ ಈ ಅಂಗಡಿಯೊಳಗೆ ಶನಿವಾರ ನಸುಕಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ತಗುಲಿದೆ.
ಇದರಿಂದ ಗೋಡೌನಿನಲ್ಲಿದ್ದ ಅಡಕೆ ಹಾಳೆಯ ಪ್ಲೇಟ್ ಗಳು, ಜೇನುತುಪ್ಪ, ಗ್ಲಾಸ್, ಬೌಲ್, ಚಮಚ, ಅಗರಬತ್ತಿ, ಬಾಳೆಕಾಯಿ, ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.
ಅಗ್ನಿಶಾಮಕ ದಳದ ಅಧಿಕಾರಿ ಎಫ್.ಎಸ್.ಒ ಶಂಕರಪ್ಪ ಅಂಗಡಿ, ಸಿಬ್ಬಂದಿಗಳಾದ ಪ್ರಣಯ ಕೊಟ್ರೆಕರ್, ನಾಗರಾಜ ನಾಯಕ, ಅಮಿತ್ ಗುನಗಿ, ಸಲೀಂ ನದಾಫ, ಶಿವಾನಂದ ಕೋಡಿ ಸ್ಥಳಕ್ಕೇ ಆಗಮಿಸಿ, ಬೆಂಕಿ ನಂದಿಸಿದರು.