February 10, 2026
Tuesday, February 10, 2026
spot_img

ಮಾರ್ಚ್ ನಲ್ಲಿ 2026ರ ಮೊದಲ ಚಂದ್ರ ಗ್ರಹಣ: ಕುಕ್ಕೆ ಶ್ರೀ ದೇಗುಲದ ದರುಶನ ಸಮಯದಲ್ಲಿ ವ್ಯತ್ಯಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಾರ್ಚ್ 3 ರಂದು ಮಂಗಳವಾರ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ದರುಶನ ಹಾಗೂ ಸೇವೆಗಳಲ್ಲಿ ವ್ಯತ್ಯಯ ಮಾಡಲಾಗಿದೆ. ಭಕ್ತರು ಸಹಕರಿಸಬೇಕಾಗಿ ಶ್ರೀ ದೇವಳದ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಸರ್ಪಸಂಸ್ಕಾರ ಪ್ರಾರಂಭ ಇಲ್ಲ:
ಮಾ.2 ಸೋಮವಾರ ಮತ್ತು 3 ಮಂಗಳವಾರ ಸರ್ಪಸಂಸ್ಕಾರ ಪೂಜೆ ಪ್ರಾರಂಭವಿರುವುದಿಲ್ಲ. ಮಾ.3 ರಂದು ಯಾವುದೇ ಸೇವೆಗಳು ದೇವಳದಲ್ಲಿ ನಡೆಯುವುದಿಲ್ಲ. ಈ ದಿನ ಮಧ್ಯಾಹ್ನದ ಮಹಾಪೂಜೆ ಬೆಳಗ್ಗೆ 8 ಗಂಟೆಗೆ ನಡೆಯಲಿದೆ. ಬೆಳಗ್ಗೆ 9 ಗಂಟೆಯ ಬಳಿಕ ಶ್ರೀ ದೇವರ ದರುಶನಕ್ಕೆ ಅವಕಾಶ ಇರುವುದಿಲ್ಲ. ಬೆಳಗ್ಗಿನ ಉಪಹಾರ 9 ಗಂಟೆ ತನಕ ಮಾತ್ರ ನಡೆಯಲಿದೆ. ಮಧ್ಯಾಹ್ನ ಪ್ರಸಾದ ಬೋಜನ ವ್ಯವಸ್ಥೆ ಇರುವುದಿಲ್ಲ. ರಾತ್ರಿ ಗಂಟೆ 7 ರ ನಂತರ ಶ್ರೀ ದೇವಳದಲ್ಲಿ ಬಾಗಿಲು ತೆರೆಯಲಾಗುವುದು. ಬಳಿಕ ಶ್ರೀ ದೇವರ ಮಹಾಪೂಜೆ ನಡೆಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !