April 2, 2026
Thursday, April 2, 2026
spot_img

Fitness ಮಂತ್ರ | ಜಿಮ್ ಹೋಗೋ ಮುಂಚೆ ಪ್ರಿ ವರ್ಕೌಟ್ ಅಂತ ಕ್ರಿಯಾಟಿನ್ ಕುಡಿತಾರೆ ಯಾಕೆ ಗೊತ್ತಾ?

ಜಿಮ್‌ಗೆ ಹೊಸದಾಗಿ ಹೋಗುವವರಿಂದ ಹಿಡಿದು ನಿಯಮಿತವಾಗಿ ವರ್ಕೌಟ್ ಮಾಡುವವರವರೆಗೆ ಹಲವರು ಪ್ರಿ-ವರ್ಕೌಟ್ ಆಗಿ ಕ್ರಿಯಾಟಿನ್ ಸೇವಿಸುವುದು ಸಾಮಾನ್ಯ. ಆದರೆ ಇದನ್ನು ಯಾಕೆ ಕುಡಿಯುತ್ತಾರೆ ಎಂಬ ಪ್ರಶ್ನೆ ನೋಡಿದವರು ಕೇಳದೆ ಇರಲ್ಲ. ನಿಮಗೂ ಇದೆ ಪ್ರಶ್ನೆ ಇದ್ರೆ ಉತ್ತರ ಇಲ್ಲಿದೆ ನೋಡಿ.

ಕ್ರಿಯಾಟಿನ್ ದೇಹದಲ್ಲಿ ಶಕ್ತಿಯನ್ನು ವೇಗವಾಗಿ ಉತ್ಪಾದಿಸಲು ಸಹಾಯ ಮಾಡುವ ಪೋಷಕಾಂಶವಾಗಿದ್ದು, ವಿಶೇಷವಾಗಿ ವೇಟ್ ಟ್ರೈನಿಂಗ್ ಮತ್ತು ಹೈ ಇಂಟೆನ್ಸಿಟಿ ವರ್ಕೌಟ್‌ಗಳಿಗೆ ಬಹಳ ಉಪಯುಕ್ತ.

ನಾವು ಭಾರವಾದ ತೂಕ ಎತ್ತುವಾಗ ಅಥವಾ ಕಡಿಮೆ ಸಮಯದಲ್ಲಿ ಹೆಚ್ಚು ಶಕ್ತಿ ಬೇಕಾಗುವ ವ್ಯಾಯಾಮ ಮಾಡುವಾಗ, ಸ್ನಾಯುಗಳಿಗೆ ತಕ್ಷಣದ ಎನರ್ಜಿ ಅಗತ್ಯವಿರುತ್ತದೆ. ಕ್ರಿಯಾಟಿನ್ ದೇಹದಲ್ಲಿ ATP ಎನ್ನುವ ಶಕ್ತಿಯ ಮೂಲವನ್ನು ಪುನಃ ನಿರ್ಮಿಸಲು ಸಹಾಯ ಮಾಡುತ್ತದೆ. ಇದರಿಂದ ಹೆಚ್ಚು ರಿಪಿಟೇಶನ್‌ಗಳು, ಹೆಚ್ಚು ಸ್ಟ್ರೆಂಥ್ ಮತ್ತು ಉತ್ತಮ ಪರ್ಫಾರ್ಮೆನ್ಸ್ ಸಿಗುತ್ತದೆ.

ಇದನ್ನೂ ಓದಿ:

ಇದನ್ನು ವರ್ಕೌಟ್ ಗೆ ಮುನ್ನ ಸೇವಿಸಿದರೆ ಸ್ನಾಯುಗಳಿಗೆ ತ್ವರಿತ ಶಕ್ತಿ ಸಿಗುವ ಅನುಭವ ದೊರೆಯಬಹುದು. ಜೊತೆಗೆ ದೀರ್ಘಾವಧಿಯಲ್ಲಿ ಸ್ನಾಯುಗಳ ಗಾತ್ರ ಮತ್ತು ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯಕವಾಗಿದೆ. ಆದರೆ ಕ್ರಿಯಾಟಿನ್ ಕುಡಿದ ತಕ್ಷಣ ಫಲಿತಾಂಶ ಸಿಗುವುದಿಲ್ಲ; ನಿಯಮಿತವಾಗಿ ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಮುಖ್ಯ.

ಹೆಚ್ಚು ನೀರು ಕುಡಿಯುವುದು ಕೂಡ ಅಗತ್ಯ, ಏಕೆಂದರೆ ಕ್ರಿಯಾಟಿನ್ ಸ್ನಾಯುಗಳಲ್ಲಿ ನೀರನ್ನು ಹಿಡಿದಿಡುತ್ತದೆ. ಇದರಿಂದ ನಿರ್ಜಲೀಕರಣ ಅಥವಾ ಸ್ನಾಯು ಸೆಳೆತ ಉಂಟಾಗಬಹುದು. ಹೀಗಾಗಿ ನಿಮ್ಮ ಫಿಟ್ನೆಸ್ ಗುರಿಗೆ ಅನುಗುಣವಾಗಿ ಟ್ರೈನರ್ ಅಥವಾ ತಜ್ಞರ ಸಲಹೆ ಪಡೆದು ಸೇವಿಸುವುದು ಉತ್ತಮ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !