March 30, 2026
Monday, March 30, 2026
spot_img

Fitness ಮಂತ್ರ | ವ್ಯಾಯಾಮದ ನಂತರ ಹಸಿವು ನಿಯಂತ್ರಣ ಮಾಡೋದು ಹೇಗೆ?

ವ್ಯಾಯಾಮ ಮುಗಿದ ತಕ್ಷಣ ಹೊಟ್ಟೆ “ಏನಾದ್ರೂ ಕೊಡು!” ಅಂತ ಕೂಗೋದು ತುಂಬಾನೇ ಸಾಮಾನ್ಯ. ವಿಶೇಷವಾಗಿ ತೂಕ ಇಳಿಸಿಕೊಳ್ಳೋವರು ಈ ಸಮಯದಲ್ಲಿ ಹೆಚ್ಚು ತಿನ್ನೋದು ದೊಡ್ಡ ಚಾಲೆಂಜ್ ಆಗಿರುತ್ತೆ. ಆದರೆ ಈ ಹಸಿವು ಶತ್ರು ಅಲ್ಲ, ಅದನ್ನು ಸ್ಮಾರ್ಟ್ ಆಗಿ ಹ್ಯಾಂಡಲ್ ಮಾಡಿದ್ರೆ ನಿಮ್ಮ ಫಿಟ್ನೆಸ್ ಜರ್ನಿ ಇನ್ನೂ ಸುಲಭವಾಗುತ್ತದೆ.

ನೀರಿನಿಂದ ಶುರು ಮಾಡಿ

ವರ್ಕೌಟ್ ನಂತರ ಮೊದಲಿಗೆ ನೀರು ಕುಡಿಯಿರಿ. ಕೆಲವೊಮ್ಮೆ ಹಸಿವು ಅನ್ನಿಸುವುದು ದೇಹದ ದಾಹವೂ ಆಗಿರಬಹುದು. ಒಂದು ಗ್ಲಾಸ್ ತಣ್ಣೀರು ಕುಡಿದರೆ ಹೊಟ್ಟೆ ಕೂಡ ಶಾಂತವಾಗುತ್ತದೆ.

“ಫಾಸ್ಟ್ ಫುಡ್” ಅಲ್ಲ, “ಫಿಟ್ ಫುಡ್” ಆಯ್ಕೆ ಮಾಡಿ

ಈ ಸಮಯದಲ್ಲಿ ಚಿಪ್ಸ್, ಕೇಕ್, ಬಿಸ್ಕಟ್ ಕಡೆಗೆ ಕೈ ಹೋಗೋದು ಸಹಜ. ಆದರೆ ಅದಕ್ಕಿಂತ ಮೊಸರು, ಬೇಯಿಸಿದ ಕಡಲೆ, ಹಣ್ಣು ಅಥವಾ ಸ್ಪ್ರೌಟ್ಸ್ ಆಯ್ಕೆ ಮಾಡಿದ್ರೆ ದೇಹಕ್ಕೆ ಬೇಕಾದ ಶಕ್ತಿ ಸಿಗುತ್ತದೆ.

ಇದನ್ನೂ ಓದಿ:

ಸಣ್ಣ ಪ್ರಮಾಣ ಸಾಕು

ವರ್ಕೌಟ್ ಮಾಡಿದೀನಿ ಅಂತ ತುಂಬಾ ತಿನ್ನಬೇಡಿ. ಸಣ್ಣ ಪ್ರಮಾಣದ ಪ್ರೋಟೀನ್ ಸ್ನ್ಯಾಕ್ ತಿಂದರೆ ಹಸಿವು ನಿಯಂತ್ರಣದಲ್ಲಿರುತ್ತದೆ.

20 ನಿಮಿಷ ನಿಯಮ

ತಕ್ಷಣ ಊಟಕ್ಕೆ ಕುಳಿತುಕೊಳ್ಳುವ ಬದಲು 15–20 ನಿಮಿಷ ಕಾಯಿರಿ. ಈ ವೇಳೆಗೆ ದೇಹದ ಹಸಿವು ಸಹಜವಾಗಿ ಕಡಿಮೆಯಾಗಬಹುದು.

ನೆನಪಿರಲಿ

ವರ್ಕೌಟ್‌ನ ನಂತರ ತಿನ್ನೋದು ತಪ್ಪಲ್ಲ, ಆದರೆ ಸರಿಯಾದದ್ದು ತಿನ್ನೋದು ಮುಖ್ಯ. ಹಸಿವು ನಿಯಂತ್ರಿಸಿದ್ರೆ ಫಲಿತಾಂಶ ಬೇಗ ಕಾಣಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !