February 16, 2026
Monday, February 16, 2026
spot_img

Fitness | ಅಡಿಯಿಂದ ಮುಡಿವರೆಗೂ ಫಿಟ್ ಆಗಿರೋಕೆ ಮನೆಯಲ್ಲೇ ಈ ವ್ಯಾಯಾಮ ಟ್ರೈ ಮಾಡಿ!

ಇಂದಿನ ಜೀವನಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ದೇಹ ಚುರುಕಾಗಿರೋದು ತುಂಬಾ ಮುಖ್ಯ. ಅತಿಯಾದ ಬೊಜ್ಜು, ಸ್ಥೂಲಕಾಯತೆ ಇವು ನಿಧಾನವಾಗಿ ಹಲವು ರೋಗಗಳಿಗೆ ಕಾರಣವಾಗುತ್ತವೆ. ಸರಿಯಾದ ಆಹಾರ ಕ್ರಮದ ಜೊತೆಗೆ ನಿಯಮಿತ ವ್ಯಾಯಾಮ ಮಾಡಿದರೆ ದೇಹದ ತೂಕ ನಿಯಂತ್ರಣದಲ್ಲಿರುತ್ತದೆ, ಶಕ್ತಿ ಹೆಚ್ಚುತ್ತದೆ ಮತ್ತು ಆರೋಗ್ಯವೂ ಉತ್ತಮವಾಗಿರುತ್ತದೆ. ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಕೆಲವು ವ್ಯಾಯಾಮಗಳು ದೇಹವನ್ನು ಸಂಪೂರ್ಣವಾಗಿ ಚುರುಕಾಗಿಸಲು ಸಹಾಯ ಮಾಡುತ್ತವೆ.

ಬರ್ಪೀಸ್: ಇದು ಫುಲ್ ಬಾಡಿ ವರ್ಕೌಟ್‌. ಸ್ಕ್ವಾಟ್, ಪುಶ್-ಅಪ್ ಮತ್ತು ಜಂಪ್ ಒಂದೇ ಸರಣಿಯಲ್ಲಿ ನಡೆಯುತ್ತದೆ. ಹೃದಯ ಬಡಿತವನ್ನು ವೇಗವಾಗಿ ಹೆಚ್ಚಿಸಿ ಹೆಚ್ಚು ಕ್ಯಾಲೊರಿ ಕರಗಿಸಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಪರಿಣಾಮಕಾರಿ.

ಕ್ರಂಚಸ್: ಹೊಟ್ಟೆಯ ಭಾಗದ ಕೊಬ್ಬು ಕಡಿಮೆ ಮಾಡಲು ಉಪಯುಕ್ತ. ನಿಯಮಿತವಾಗಿ ಮಾಡಿದರೆ ಆಬ್ಸ್ ಭಾಗ ಬಲವಾಗಿ ದೇಹದ ಭಂಗಿ ಸುಧಾರಿಸುತ್ತದೆ.

ಪ್ಲಾಂಕ್ಸ್: ಕೋರ್ ಸ್ನಾಯುಗಳನ್ನು ಗಟ್ಟಿಗೊಳಿಸುವ ಅತ್ಯುತ್ತಮ ವ್ಯಾಯಾಮ. ಬೆನ್ನುಮೂಳೆಯ ಬೆಂಬಲ ಹೆಚ್ಚಿಸಿ ಬೆನ್ನುನೋವು ಕಡಿಮೆ ಮಾಡಲು ಸಹಕಾರಿ.

ಇದನ್ನೂ ಓದಿ:

ಸ್ಕ್ವಾಟ್‌ಗಳು: ಕಾಲುಗಳ ದೊಡ್ಡ ಸ್ನಾಯುಗಳಿಗೆ ಬಲ ನೀಡುತ್ತವೆ. ದೇಹದ ಕೆಳಭಾಗದ ಶಕ್ತಿ ಹಾಗೂ ಸಮತೋಲನ ಹೆಚ್ಚಿಸುತ್ತದೆ.

ಜಂಪಿಂಗ್ ಜ್ಯಾಕ್: ಯಾವುದೇ ಉಪಕರಣವಿಲ್ಲದೆ ಮಾಡುವ ಸರಳ ಕಾರ್ಡಿಯೋ ವ್ಯಾಯಾಮ. ದೇಹದ ಎಲ್ಲ ಭಾಗಗಳಿಗೂ ಚಲನೆ ನೀಡುತ್ತದೆ.

ವ್ಯಾಯಾಮ ಮಾಡುವ ಮೊದಲು ವಾರ್ಮ್-ಅಪ್ ಮಾಡುವುದು, ಮಧ್ಯಂತರದಲ್ಲಿ ನೀರು ಕುಡಿಯುವುದು ಮತ್ತು ಅತಿಯಾಗಿ ಮಾಡದೆ ವಿಶ್ರಾಂತಿ ತೆಗೆದುಕೊಳ್ಳುವುದು ಅಗತ್ಯ. ನಿಯಮಿತ ಅಭ್ಯಾಸವೇ ದೀರ್ಘಕಾಲದ ಫಲಿತಾಂಶ ನೀಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !