Monday, October 27, 2025

ಹತ್ತಿ, ಹತ್ತಿ ಬೀಜದ ಬೆಲೆ 60 ಸಾವಿರ ನಿಗದಿ ಪಡಿಸಿ: ರಾಜ್ಯ ಸರ್ಕಾರಕ್ಕೆ ಹೆಚ್.ಡಿ ಕುಮಾರಸ್ವಾಮಿ ಪತ್ರ

ಹೊಸ ದಿಗಂತ ಡಿಜಿಟಲ್ ಡೆಸ್ಕ್:


ರಾಜ್ಯದಲ್ಲಿ ಹತ್ತಿ ಖರೀದಿ ಬೆಲೆಯನ್ನು 45,000ಕ್ಕೆ ನಿಗದಿ ಪಡಿಸಿರುವ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಈ ಬೆಲೆಯನ್ನು ರೂ.60,000ಕ್ಕೆ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪತ್ರ ಬರೆದು ಆಗ್ರಹಿಸಿದ್ದಾರೆ.

ಈ ಕುರಿತಂತೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರಿಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಅದರಲ್ಲಿ ನಮಸ್ಕಾರಗಳು, ಉಗ್ರೇಶ್, ಜೆ.ಡಿ.ಎಸ್ ಮುಖಂಡರು, ಸಿರಾ ವಿಧಾನಸಭಾ ಕ್ಷೇತ್ರ ತುಮಕೂರು ಜಿಲ್ಲೆ ಇವರು ಸಲ್ಲಿಸಿರುವ ಸಯಂವರ ಮನವಿಯನ್ನು ಇದರೊಂದಿಗೆ ಲಗತಿ ನಮ್ಮ ಅವಗಾಹನೆಗಾಗಿ ರವಾನಿಸಲಾಗಿದೆ ಎಂದಿದ್ದಾರೆ.

ಸಿರಾ ಹಾಗೂ ಅಕಪಕದ ಪಾವಗಡ, ಮಧುಗಿರಿ, ಹಿರಿಯೂರು ಮತ್ತು ಆಂಧ್ರಪ್ರದೇಶದ ಮಡಕಶಿರಾ ತಾಲೂಕುಗಳಲ್ಲಿನ ರೈತರಿಗೆ ಹತ್ತಿ ಮತ್ತು ಹತ್ತಿ ಬೀಜದ ಬೆಲೆ ಕಳೆದ ವರ್ಷ ರೂ. 50,000ಗಳು ನಿಗದಿಯಾಗಿದ್ದು ಈ ವರ್ಷ ರೂ. 45,000 ಗಳಿಗೆ ನಿಗದಿಯಾಗಿದೆ. ದಿನಗೂಲಿ ಕಾರ್ಮಿಕರ ವೇತನ, ರಸಗೊಬದ್ಧ, ಕೀಟನಾಶಕ ಮತ್ತು ಕೃಷಿ ವಸ್ತುಗಳ ಬೆಳೆಗಳು ರೈತರ ಬದುಕಿಗೆ ಹೊರೆಯಾಗಿರುವುದರಿಂದ, ಸದರಿ ಬೆಲೆಯನ್ನು ರೂ. 60,000 ಗಳಿಗೆ ನಿಗದಿ ಮಾಡುವಂತೆ ವಿನಂತಿಸಿದಾರೆ.

error: Content is protected !!