Friday, October 31, 2025

ನಾಳೆಯಿಂದಲೇ ಶುರುವಾಗಲಿದೆ ಬೆಂಗಳೂರಿನಿಂದ ವಿಮಾನ ಸೇವೆ: ಇನ್ನು ಜಸ್ಟ್ ಐವತ್ತು ನಿಮಿಷದಲ್ಲಿ ಹಂಪಿ!


ಹೊಸದಿಗಂತ ಡಿಜಿಟಲ್ ಡೆಸ್ಕ್:


ವಿಶ್ವ ವಿಖ್ಯಾತ ಹಂಪಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ನಾಳೆಯಿಂದ ವಿಮಾನ ಸೇವೆ ಆರಂಭಗೊಳ್ಳಲಿದೆ.


ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಹಾಗೂ ಪ್ರವಾಸೋದ್ಯಮಕ್ಕೆ ಇನ್ನಷ್ಟು ಬಲ ನೀಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಜೊತೆಗೂಡಿ ಹಂಪಿಗೆ ವಿಮಾನ ಸೇವೆ ಒದಗಿಸಲು ಖಾಸಗಿ ಕಂಪನಿ ಮುಂದಾಗಿದೆ.


ಬೆಳಿಗ್ಗೆ 7.50 ನಿಮಿಷಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ 8.40ಕ್ಕೆ ತೋರಣಗಲ್ಲಿನ ವಿಜಯನಗರ ನಿಲ್ದಾಣಕ್ಕೆ ಆಗಮಿಸಲಿದೆ. ಬೆಳಗ್ಗೆ 9.10ಕ್ಕೆ ಹಂಪಿಯಿಂದ ನಿರ್ಗಮಿಸಿ, ೧೦ ಗಂಟೆಗೆ ಬೆಂಗಳೂರು ತಲುಪಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಪ್ರಭುಲಿಂಗ ತಳಕೇರಿ ತಿಳಿಸಿದ್ದಾರೆ.

error: Content is protected !!