ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯ ಸಸ್ಯಕಾಶಿ ಲಾಲ್‌ಬಾಗ್ ಮತ್ತೊಮ್ಮೆ ಹೂವಿನ ಲೋಕವಾಗಿ ಬದಲಾಗಲು ಸಜ್ಜಾಗಿದೆ. 2026ರ ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕಾ ಇಲಾಖೆಯು ಜನವರಿ 14ರಿಂದ 26ರವರೆಗೆ 219ನೇ ಐತಿಹಾಸಿಕ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿದೆ.
ಈ ಬಾರಿಯ ಪ್ರದರ್ಶನದ ವಿಶೇಷತೆಯೆಂದರೆ ಕನ್ನಡದ ಖ್ಯಾತ ಸಾಹಿತಿ, ಪರಿಸರ ಪ್ರೇಮಿ ಪೂರ್ಣಚಂದ್ರ ತೇಜಸ್ವಿ ಅವರ ಜೀವನಗಾಥೆ. ಗಾಜಿನ ಮನೆಯಲ್ಲಿ ತೇಜಸ್ವಿ ದಂಪತಿಯ ಪ್ರತಿಕೃತಿ, ಪ್ರಸಿದ್ಧ ‘ಕರ್ವಾಲೋ’ ಕಾದಂಬರಿಯ ಕಾಲ್ಪನಿಕ ದೃಶ್ಯಗಳು, ಬಿಳಿಗಿರಿ ರಂಗನ ಬೆಟ್ಟದ ಹಳ್ಳಿ ಸೊಗಡು ಮತ್ತು ನಂದಿ ಬೆಟ್ಟದ ಮಾದರಿಗಳನ್ನು ಹೂವುಗಳ ಮೂಲಕ ನಿರ್ಮಿಸಲಾಗುತ್ತಿದೆ.
ಜ.14ರ ಸಂಜೆ 4 ಗಂಟೆಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಂದ ಚಾಲನೆ. ಅಂದೇ ಸಂಜೆ 5 ಗಂಟೆಯಿಂದ ಸಾರ್ವಜನಿಕರಿಗೆ ಪ್ರವೇಶಾವಕಾಶ.
ಸುಮಾರು 32 ಲಕ್ಷಕ್ಕೂ ಹೆಚ್ಚು ಹೂವುಗಳನ್ನು ಬಳಸಲಾಗುತ್ತಿದ್ದು, ಇದರಲ್ಲಿ 27 ಲಕ್ಷ ಹೂವುಗಳನ್ನು ಲಾಲ್‌ಬಾಗ್‌ನಲ್ಲೇ ಬೆಳೆಸಲಾಗಿದೆ. ತಮಿಳುನಾಡು, ಕೇರಳ ಮತ್ತು ಡಾರ್ಜಿಲಿಂಗ್‌ನಿಂದಲೂ ವಿಶೇಷ ಹೂವುಗಳು ಬರಲಿವೆ.
ಸಾರ್ವಜನಿಕರ ಅನುಕೂಲಕ್ಕಾಗಿ ಇಲಾಖೆಯು ಈ ಕೆಳಗಿನಂತೆ ಟಿಕೆಟ್ ದರ ನಿಗದಿಪಡಿಸಿದೆ:

ಕಳೆದ ಬಾರಿ 3 ಕೋಟಿಗೂ ಅಧಿಕ ಆದಾಯ ಗಳಿಸಿದ್ದ ಈ ಪ್ರದರ್ಶನಕ್ಕೆ ಈ ಬಾರಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆಯಿದೆ.



