January17, 2026
Saturday, January 17, 2026
spot_img

ಮೈಸೂರು ಅರಮನೆ ಅಂಗಳದಲ್ಲಿ ಪುಷ್ಪವೈಭವ: ಈ ಬಾರಿ ಏನ್ ವಿಶೇಷ ಇದೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಂಸ್ಕೃತಿಕ ನಗರಿ ಮೈಸೂರು ಇದೀಗ ನಿಜಕ್ಕೂ ‘ಹೂಗಳ ನಗರಿ’ಯಾಗಿ ರೂಪಾಂತರಗೊಂಡಿದೆ. ಹೊಸ ವರ್ಷ ಹಾಗೂ ಕ್ರಿಸ್‌ಮಸ್ ಸಂಭ್ರಮದ ನಡುವೆ ಅರಮನೆ ಅಂಗಳದಲ್ಲಿ ಆಯೋಜಿಸಿರುವ ಮಾಗಿ ಉತ್ಸವದ ಫಲ–ಪುಷ್ಪ ಪ್ರದರ್ಶನ ನಗರಕ್ಕೆ ಹೊಸ ಮೆರುಗು ತಂದಿದೆ.

ಭಾನುವಾರ ಆರಂಭವಾದ ಪ್ರದರ್ಶನದಲ್ಲಿ ಲಕ್ಷಾಂತರ ಹೂಗಳಿಂದ ನಿರ್ಮಿಸಲಾದ ಬೃಹತ್ ಕಲಾಕೃತಿಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಶೃಂಗೇರಿ ದೇಗುಲ ಮಾದರಿ ಈ ಬಾರಿಯ ವಿಶೇಷ ಆಕರ್ಷಣೆಯಾಗಿದ್ದು, ಹೂವಿನಿಂದ ರೂಪುಗೊಂಡ ಈ ದೇವಾಲಯ 50 ಅಡಿ ಅಗಲ, 16 ಅಡಿ ಉದ್ದ ಹಾಗೂ 25 ಅಡಿ ಎತ್ತರ ಹೊಂದಿದೆ. ಇದರ ಜೊತೆಗೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಗೌರವ ಸಲ್ಲಿಸುವಂತೆ ಹೂ ಹಾಗೂ ಸಿರಿಧಾನ್ಯಗಳಿಂದ ನಿರ್ಮಿಸಿದ ಕಲಾಕೃತಿ ಪರಿಸರ ಜಾಗೃತಿಗೆ ಸಂದೇಶ ನೀಡುತ್ತಿದೆ.

ಅರಮನೆ ಆವರಣದಲ್ಲಿ 25 ಸಾವಿರಕ್ಕೂ ಹೆಚ್ಚು ಜಾತಿಯ ಹೂಕುಂಡಗಳು, ಲಕ್ಷಾಂತರ ಗುಲಾಬಿ ಹೂಗಳು ಹಾಗೂ ಅಲಂಕಾರಿಕ ಕಟ್ ಫ್ಲವರ್‌ಗಳಿಂದ ಪ್ರದರ್ಶನ ವೈಭವ ಹೆಚ್ಚಿದೆ. ಸಂವಿಧಾನ ಪೀಠಿಕೆ, ಮಹನೀಯರ ಭಾವಚಿತ್ರಗಳು, ಮಹಿಳಾ ಕ್ರಿಕೆಟ್ ವಿಶ್ವಕಪ್ ಸಾಧನೆ ಹಾಗೂ ಸೇನೆಯ ಶೌರ್ಯವನ್ನು ಪ್ರತಿಬಿಂಬಿಸುವ ಹೂವಿನ ಆಕೃತಿಗಳು ಜನರನ್ನು ಮನಸೂರೆಗೊಳ್ಳುತ್ತಿವೆ. ಈ ಪುಷ್ಪ ಪ್ರದರ್ಶನ ಮೈಸೂರಿಗೆ ಭೇಟಿ ನೀಡುವವರಿಗೆ ವಿಶಿಷ್ಟ ಅನುಭವ ನೀಡುತ್ತಿದೆ.

Must Read

error: Content is protected !!