January19, 2026
Monday, January 19, 2026
spot_img

Sarees| ದುಬಾರಿ ಬೆಲೆಯ ಸೀರೆಗಳನ್ನು ಸೇಫ್​ ಆಗಿರಿಸೋಕೇ ಈ ಟಿಪ್ಸ್ ಫಾಲೋ ಮಾಡಿ

ಭಾರತೀಯ ಪರಂಪರೆಯಲ್ಲಿ ಸೀರೆಗಳು ಮಹಿಳೆಯರ ಅಳಿದುಹೋಗದ ಆಭರಣವೆಂದೇ ಪರಿಗಣಿಸಲ್ಪಟ್ಟಿವೆ. ಮೈಸೂರು ಸಿಲ್ಕ್, ಕಾಂಚಿವರಂ, ಇಳಕಲ್ ಸೀರೆಗಳು ಮಾತ್ರವಲ್ಲದೆ, ವಿವಿಧ ಪ್ರದೇಶಗಳಲ್ಲಿ ಹಲವಾರು ವಿನ್ಯಾಸಗಳ ಸೀರೆಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿವೆ. ಮದುವೆ, ಧಾರ್ಮಿಕ ಕಾರ್ಯಕ್ರಮ, ಹಬ್ಬ ಅಥವಾ ವಿಶೇಷ ದಿನ ಯಾವುದೇ ಇರಲಿ, ಸೀರೆ ಧರಿಸುವುದರಿಂದ ಅದಕ್ಕೆ ಹೆಚ್ಚುವರಿ ಕಳೆ ತಂದುಕೊಡುತ್ತದೆ. ಆದರೆ ಸೀರೆಗಳನ್ನು ಕೇವಲ ಧರಿಸುವುದಷ್ಟೇ ಅಲ್ಲ, ಅವನ್ನು ಸರಿಯಾಗಿ ಸಂರಕ್ಷಿಸುವುದೂ ಅಗತ್ಯ. ಇಲ್ಲವಾದರೆ ದುಬಾರಿ ರೇಷ್ಮೆ ಸೀರೆಗಳು ಹಾಳಾಗುವ ಅಪಾಯವಿರುತ್ತದೆ. ಈ ಹಿನ್ನೆಲೆಯಲ್ಲಿ ಸೀರೆಗಳನ್ನು ದೀರ್ಘಕಾಲ ಕಾಪಾಡಲು ಕೆಲವು ಸರಳ ಸಲಹೆಗಳನ್ನು ಪಾಲಿಸುವುದು ಮುಖ್ಯ.

ಸೀರೆಯನ್ನು ಒಣಗಿಸಿ ಇಡಿ
ಕಾರ್ಯಕ್ರಮ ಮುಗಿದ ನಂತರ ಸೀರೆಯನ್ನು ಹಾಗೆಯೇ ಮಡಚಿ ಇಡುವ ಬದಲು, ಕನಿಷ್ಠ 20 ನಿಮಿಷಗಳ ಕಾಲ ಗಾಳಿಯಲ್ಲಿ ಒಣಗಲು ಬಿಡಿ. ಇದರಿಂದ ತೇವಾಂಶ ಹೋಗಿ ಸೀರೆಯ ವಾಸನೆ ತಪ್ಪುತ್ತದೆ.

ಎಣ್ಣೆಯ ಕಲೆಗಳ ನಿರ್ವಹಣೆ
ಸೀರೆಯ ಮೇಲೆ ಎಣ್ಣೆಯ ಕಲೆ ಬಿದ್ದರೆ ತಕ್ಷಣ ಟಾಲ್ಕಮ್ ಪೌಡರ್ ಹಚ್ಚಿ, ಕಾಟನ್ ಬಟ್ಟೆ ಅಥವಾ ಟಿಷ್ಯು ಬಳಸಿ ಒರೆಸಿ. ಇದರಿಂದ ಕಲೆ ಬಿಟ್ಟಿ ಹೋಗುತ್ತದೆ.

ಸರಿಯಾದ ಇಸ್ತ್ರಿ ವಿಧಾನ
ಸೀರೆಯನ್ನು ನೇರವಾಗಿ ಇಸ್ತ್ರಿ ಮಾಡಬೇಡಿ. ಉಲ್ಟಾಗಿ ಇಸ್ತ್ರಿ ಮಾಡಿದರೆ ಬಣ್ಣ ಹಾಳಾಗುವುದಿಲ್ಲ, ಜೊತೆಗೆ ಜರಿಗೂ ಹಾನಿ ಆಗುವುದಿಲ್ಲ.

ಮಡಚುವ ವಿಧಾನ ಬದಲಾಯಿಸಿ
ಮೈಸೂರು ಸಿಲ್ಕ್ ಸೀರೆಯನ್ನು ಒಂದೇ ರೀತಿಯಾಗಿ ಮಡಚಬಾರದು. ಪ್ರತೀ ಸಲ ವಿಭಿನ್ನವಾಗಿ ಮಡಚಿ ಇಡುವುದರಿಂದ ಮಡಚಿದ ಗುರುತುಗಳು ಶಾಶ್ವತವಾಗುವುದಿಲ್ಲ.

ಕಾಟನ್ ಬ್ಯಾಗ್ ಬಳಕೆ
ಸೀರೆಯನ್ನು ಕಾಟನ್ ಬ್ಯಾಗ್‌ನಲ್ಲಿ ಮಡಚಿ ಇಡಿ. ಜೊತೆಗೆ ಪಲಾವ್ ಎಲೆ, ಲವಂಗ ಅಥವಾ ಏಲಕ್ಕಿ ಇಟ್ಟರೆ ಫಂಗಸ್‌ ಅಟ್ಟ್ಯಾಕ್ ಆಗುವುದಿಲ್ಲ.

ಸೀರೆ ಖರೀದಿಸುವುದು ಅಷ್ಟೇ ಮುಖ್ಯವಾದರೆ, ಅದನ್ನು ಸಂರಕ್ಷಿಸುವುದೂ ಅಷ್ಟೇ ಮುಖ್ಯ. ಸಣ್ಣ ಸಣ್ಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ದುಬಾರಿ ಸೀರೆಗಳು ವರ್ಷಗಳವರೆಗೆ ಹಾಳಾಗದೇ ಉಳಿಯುತ್ತವೆ. ಹೀಗಾಗಿ, ಈ ಸರಳ ಟಿಪ್ಸ್ ಪಾಲಿಸಿ ನಿಮ್ಮ ಸೀರೆಗಳನ್ನು ದೀರ್ಘಕಾಲ ಹೊಸದಿನಂತೆ ಕಾಪಾಡಿಕೊಳ್ಳಿ.

Must Read

error: Content is protected !!