ಮಧ್ಯಾಹ್ನದ ಊಟಕ್ಕೆ ಒಂದೇ ತರಹದ ಸಾರು-ಸಾಂಬಾರು ತಿನ್ನೋದು ಬೇಜಾರು. ಪ್ರೋಟೀನ್ ತುಂಬಿರುವ, ಒಮ್ಮೊಮ್ಮೆ ನಾನ್-ವೆಜ್ ರುಚಿಗೂ ಹೋಲುವ ವಿಶೇಷ ಶಾಕಾಹಾರಿ ಪದಾರ್ಥ ಬೇಕಾದ್ರೆ ಸೋಯಾ ಕೀಮಾ ಫ್ರೈ ಅದ್ಭುತ ಆಯ್ಕೆ. ಇದು ಅನ್ನ, ಚಪಾತಿ, ಜೋಳದ ರೊಟ್ಟಿಗೆ ಎಲ್ಲಕ್ಕೂ ಚೆನ್ನಾಗಿ ಹೊಂದುತ್ತದೆ.
ಬೇಕಾಗುವ ಸಾಮಗ್ರಿಗಳು:
ಸೋಯಾ ಚಂಕ್ಸ್ – 1 ಕಪ್
ಈರುಳ್ಳಿ – 2
ಟೊಮೇಟೋ – 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಹಸಿಮೆಣಸು – 2
ಜೀರಿಗೆ – 1 ಚಮಚ
ಅರಿಶಿನ – ¼ ಚಮಚ
ಮೆಣಸಿನಕಾಯಿ ಪುಡಿ – 1 ಚಮಚ
ಧನಿಯಾ ಪುಡಿ – 1 ಚಮಚ
ಗರಂ ಮಸಾಲಾ – ½ ಚಮಚ
ಎಣ್ಣೆ – 2 ಚಮಚ
ಉಪ್ಪು – ರುಚಿಗೆ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ವಿಧಾನ:
ಮೊದಲು ಸೋಯಾ ಚಂಕ್ಸ್‌ನ್ನು ಉಪ್ಪು ಹಾಕಿ ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿ, ನಂತರ ನೀರು ಹಿಂಡಿ ತೆಗೆದು ಮಿಕ್ಸಿಯಲ್ಲಿ ಒಮ್ಮೆ ತಿರುಗಿಸಿದರೆ ಸೋಯಾ ಕೀಮಾ ರೆಡಿ. ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ನಂತರ ಜೀರಿಗೆ, ಈರುಳ್ಳಿ, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಟೊಮೇಟೋ ಹಾಕಿ ಬೇಯಿಸಿ. ಈಗ ಅರಿಶಿನ, ಮೆಣಸಿನಕಾಯಿ ಪುಡಿ, ಧನಿಯಾ ಪುಡಿ, ಉಪ್ಪು ಸೇರಿಸಿ ಮಸಾಲೆ ಚೆನ್ನಾಗಿ ಹುರಿಯಿರಿ.
ಬಳಿಕ ಸೋಯಾ ಕೀಮಾವನ್ನು ಸೇರಿಸಿ ಮಧ್ಯಮ ಉರಿಯಲ್ಲಿ 5–7 ನಿಮಿಷ ಫ್ರೈ ಮಾಡಿ. ಕೊನೆಗೆ ಗರಂ ಮಸಾಲಾ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿದರೆ ಸೋಯಾ ಕೀಮಾ ಫ್ರೈ ರೆಡಿ.

