February 5, 2026
Thursday, February 5, 2026
spot_img

FOOD | ಬೀಟ್ರೂಟ್ ನಿಂದ ಪಲ್ಯ ಮಾತ್ರ ಮಾಡೋದಲ್ಲ ಬಿರಿಯಾನಿ ಕೂಡ ಆಗುತ್ತೆ! ಟ್ರೈ ಮಾಡಿದ್ರೆ ಗೊತ್ತಾಗುತ್ತೆ

ಬೀಟ್ರೂಟ್ ನೋಡಿ ಮಧ್ಯಾಹ್ನದ ಊಟಕ್ಕೆಪಲ್ಯ ಮಾಡೋಣ ಅನ್ಕೊಂಡ್ರೆ ತಡೀರಿ! ಇವತ್ತು ಪಲ್ಯದ ಬದಲು ಈ ಸಿಂಪಲ್ ಬೀಟ್ರೂಟ್ ಬಿರಿಯಾನಿ ಮಾಡಿ ನೋಡಿ. ಇದು ಸಾಮಾನ್ಯ ವೆಜ್ ಬಿರಿಯಾನಿಗಿಂತ ಬಣ್ಣದಲ್ಲಿ ಆಕರ್ಷಕವಾಗಿದ್ದು, ರುಚಿಯಲ್ಲೂ ತುಂಬಾ ವಿಭಿನ್ನವಾಗಿರುತ್ತದೆ.

ಬೇಕಾಗುವ ಪದಾರ್ಥಗಳು:

ಬೀಟ್ರೂಟ್ – 1
ಅಕ್ಕಿ – 1 ಕಪ್
ಮೊಸರು – 2 ಸ್ಪೂನ್
ಈರುಳ್ಳಿ – 1
ಟೊಮೇಟೊ – 1
ಹಸಿ ಮೆಣಸಿನಕಾಯಿ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಸ್ಪೂನ್
ಪುದೀನ, ಕೊತ್ತಂಬರಿ ಸೊಪ್ಪು – ಸ್ವಲ್ಪ
ಖಾರದ ಪುಡಿ – 1/2 ಸ್ಪೂನ್
ಬಿರಿಯಾನಿ ಪುಡಿ – 1 ಸ್ಪೂನ್
ಲವಂಗ, ದಾಲ್ಚಿನ್ನಿ, ಏಲಕ್ಕಿ, ಪಲಾವ್ ಎಲೆ – ಸ್ವಲ್ಪ
ತುಪ್ಪ + ಎಣ್ಣೆ – 2 ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – 2 ಕಪ್

ಮಾಡುವ ವಿಧಾನ:

ಮೊದಲು ಕುಕ್ಕರ್‌ನಲ್ಲಿ ತುಪ್ಪ ಮತ್ತು ಎಣ್ಣೆ ಬಿಸಿ ಮಾಡಿ. ಅದಕ್ಕೆ ಲವಂಗ, ದಾಲ್ಚಿನ್ನಿ, ಏಲಕ್ಕಿ, ಪಲಾವ್ ಎಲೆ ಹಾಕಿ ಸುಗಂಧ ಬರುವವರೆಗೆ ಫ್ರೈ ಮಾಡಿ. ನಂತರ ಈರುಳ್ಳಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ.

ಇದಕ್ಕೆ ಹಸಿ ಮೆಣಸಿನಕಾಯಿ, ಪುದೀನ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ. ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ ಮತ್ತು ಟೊಮೇಟೊ ಹಾಕಿ ಚೆನ್ನಾಗಿ ಫ್ರೈ ಆಗಲು ಬಿಡಿ. ಈಗ ಕತ್ತರಿಸಿದ ಬೀಟ್ರೂಟ್ ಸೇರಿಸಿ 2 ನಿಮಿಷ ಹುರಿಯಿರಿ.

ನಂತರ ಮೊಸರು, ಬಿರಿಯಾನಿ ಪುಡಿ ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ. ಈಗ 2 ಕಪ್ ನೀರು ಸೇರಿಸಿ ಕುದಿಯಲು ಬಿಡಿ. ಕುದಿ ಬಂದ ಮೇಲೆ ನೆನೆಸಿದ ಅಕ್ಕಿ ಹಾಕಿ ಮಿಶ್ರಣ ಮಾಡಿ, ಕುಕ್ಕರ್ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. ಒತ್ತಡ ಇಳಿದ ನಂತರ ಮುಚ್ಚಳ ತೆರೆದು ಸ್ವಲ್ಪ ಮಿಕ್ಸ್ ಮಾಡಿದರೆ, ಬಿಸಿ ಬಿಸಿ ಬೀಟ್ರೂಟ್ ಬಿರಿಯಾನಿ ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !