February 11, 2026
Wednesday, February 11, 2026
spot_img

FOOD | ಕೇವಲ 10 ನಿಮಿಷದಲ್ಲಿ ರೆಡಿ ಆಗುತ್ತೆ ಗರಿಗರಿಯಾದ ಸ್ವೀಟ್ ಕಾರ್ನ್ ಪಕೋಡ

ಸಂಜೆ ಹೊತ್ತು ಏನಾದರೂ ಚಿಕ್ಕದಾಗಿ, ಬಿಸಿ ಬಿಸಿ ತಿಂಡಿ ತಿನ್ಬೇಕು ಅನಿಸೋ ಸಮಯ. ಅಂಥ ಟೈಮ್‌ಗೆ ಹೆಚ್ಚು ಸಮಯ ಹಿಡಿಯದೇ, ಕಿಚನ್‌ನಲ್ಲೇ ಸಿಗೋ ಸಾಮಾನುಗಳಿಂದ ತಕ್ಷಣ ಮಾಡ್ಕೊಳಬಹುದಾದ ರೆಸಿಪಿ ಅಂದ್ರೆ ಸ್ವೀಟ್ ಕಾರ್ನ್ ಪಕೋಡ. ಹೊರಗೆ ಗರಿಗರಿ, ಒಳಗೆ ಸ್ವಲ್ಪ ಸಿಹಿ ರುಚಿ ಇರುವ ಈ ಪಕೋಡ ಒಮ್ಮೆ ಮಾಡಿದ್ರೆ ಮತ್ತೆ ಮತ್ತೆ ಮಾಡ್ಬೇಕೆನಿಸುವಷ್ಟು ಟೇಸ್ಟಿ ಆಗಿರುತ್ತೆ.

ಬೇಕಾಗುವ ಪದಾರ್ಥಗಳು:

ಸ್ವೀಟ್ ಕಾರ್ನ್ – 1 ಕಪ್
ಕಡಲೆಹಿಟ್ಟು – ½ ಕಪ್
ಅಕ್ಕಿಹಿಟ್ಟು – 2 ಟೇಬಲ್ ಸ್ಪೂನ್
ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದ)
ಹಸಿಮೆಣಸು – 2
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮೆಣಸಿನ ಪುಡಿ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಬೇಯಿಸಿದ ಸ್ವೀಟ್ ಕಾರ್ನ್, ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ಕಡಲೆಹಿಟ್ಟು, ಅಕ್ಕಿಹಿಟ್ಟು, ಮೆಣಸಿನ ಪುಡಿ, ಉಪ್ಪು ಸೇರಿಸಿ. ಸ್ವಲ್ಪ ನೀರು ಹಾಕಿ ಗಟ್ಟಿಯಾದ ಮಿಶ್ರಣ ಮಾಡಿಕೊಳ್ಳಿ.

ಕಡಾಯಿಯಲ್ಲಿ ಎಣ್ಣೆ ಬಿಸಿ ಆದ ಮೇಲೆ ಮಿಶ್ರಣವನ್ನು ಚಿಕ್ಕ ಚಿಕ್ಕ ತುಂಡುಗಳಂತೆ ಹಾಕಿ, ಮಧ್ಯಮ ಉರಿಯಲ್ಲಿ ಗರಿಗರಿಯಾಗಿ ಕರಿಯಿರಿ.

ಗೋಲ್ಡನ್ ಬಣ್ಣ ಬಂದ ಮೇಲೆ ತೆಗೆದು, ಬಿಸಿ ಬಿಸಿಯಾಗಿ ಚಟ್ನಿ ಅಥವಾ ಟೊಮ್ಯಾಟೊ ಸಾಸ್ ಜೊತೆ ಸರ್ವ್ ಮಾಡಿದ್ರೆ ಮಜಾ ಇನ್ನಷ್ಟು ಹೆಚ್ಚಾಗುತ್ತೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !