ಲೈಟ್ ಆಗಿ, ಹೆಲ್ತಿಯಾಗಿಯೂ ಏನಾದ್ರೂ ತಿನ್ಬೇಕು ಅನ್ನಿಸಿದ್ರೆ ಚಿಕನ್ ಸಲಾಡ್ ಬೆಸ್ಟ್. ಜಿಮ್ ಹೋಗೋರಿಗೆ, ಡಯಟ್ ಫಾಲೋ ಮಾಡೋರಿಗೆ ಇದು ತುಂಬಾ ಸೂಕ್ತ. ಪ್ರೋಟೀನ್, ತರಕಾರಿ, ಫ್ರೆಶ್ ಟೇಸ್ಟ್ ಎಲ್ಲವೂ ಒಂದೇ ಪ್ಲೇಟ್‌ನಲ್ಲಿ ಸಿಗೋ ಸಿಂಪಲ್ ಮತ್ತು ಟೇಸ್ಟಿ ರೆಸಿಪಿ ಇದು.
ಬೇಕಾಗುವ ಪದಾರ್ಥಗಳು:
ಬೇಯಿಸಿದ ಚಿಕನ್ – 1 ಕಪ್
ಈರುಳ್ಳಿ – 1
ಟೊಮೇಟೊ – 1
ಸೌತೆಕಾಯಿ – 1
ಲೆಟ್ಯೂಸ್ ಅಥವಾ ಕೋಸು – ಸ್ವಲ್ಪ
ಮೆಣಸು ಪುಡಿ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಲಿಂಬೆ ರಸ – 1 ಟೀ ಸ್ಪೂನ್
ಆಲಿವ್ ಆಯಿಲ್ / ಬೆಣ್ಣೆ – 1 ಟೀ ಸ್ಪೂನ್
ಮಾಡುವ ವಿಧಾನ:
ಮೊದಲು ಚಿಕನ್‌ನ್ನು ಚೆನ್ನಾಗಿ ಬೇಯಿಸಿ ಸಣ್ಣ ಸಣ್ಣ ತುಂಡುಗಳಾಗಿ ಚೂರು ಮಾಡಿ. ಒಂದು ದೊಡ್ಡ ಬೌಲ್‌ನಲ್ಲಿ ಚಿಕನ್, ಈರುಳ್ಳಿ, ಟೊಮೇಟೊ, ಸೌತೆಕಾಯಿ ಮತ್ತು ಲೆಟ್ಯೂಸ್ ಸೇರಿಸಿ. ಅದಕ್ಕೆ ಉಪ್ಪು, ಮೆಣಸು ಪುಡಿ, ಲಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಕೊನೆಯಲ್ಲಿ ಸ್ವಲ್ಪ ಆಲಿವ್ ಆಯಿಲ್ ಹಾಕಿ ಮತ್ತೆ ಕಲಸಿ. ತಕ್ಷಣ ಸರ್ವ್ ಮಾಡಿದ್ರೆ ಫ್ರೆಶ್ ಟೇಸ್ಟ್ ಸಿಗುತ್ತೆ.



